ಚಿಂತಾಕಿ: ಮಾಜಿ ಸಚಿವ ನಾಗಮಾರಪಳ್ಳಿ ಪುಣ್ಯಸ್ಮರಣೆ ಆಚರಣೆ

ಬೀದರ್:ನ.18: ಔರಾದ್ ತಾಲ್ಲೂಕಿನ ಚಿಂತಾಕಿಯಲ್ಲಿ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಆರನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಗ್ರಾಮದ ನಾಗಮಾರಪಳ್ಳಿ ಅವರ ಫಾರ್ಮ್‍ಹೌಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಬೆಂಬಲಿಗರು ಹಾಗೂ ಅಭಿಮಾನಿಗಳು ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಅನೇಕರು ದಿ. ನಾಗಮಾರಪಳ್ಳಿ ಅವರು ಸಚಿವ, ಶಾಸಕ, ಡಿಸಿಸಿ ಬ್ಯಾಂಕ್, ಎನ್‍ಎಸ್‍ಎಸ್‍ಕೆ ಅಧ್ಯಕ್ಷರಾಗಿ ಬೀದರ್ ಜಿಲ್ಲೆಗೆ ನೀಡಿದ್ದ ಕೊಡುಗೆಯನ್ನು ಸ್ಮರಿಸಿದರು.

ಸಂಗೀತ, ಭಜನೆ ಸೇರಿದಂತೆ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆದವು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ತರುಣ್ ಎಸ್. ನಾಗಮಾರಪಳ್ಳಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ, ಉಪಾಧ್ಯಕ್ಷ ಬಾಲಾಜಿ ಚವಾಣ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಮುಖಂಡರಾದ ಶಾಂತಕುಮಾರ ಮುದಾಳೆ, ಸುನೀಲ್‍ಸಿಂಗ್ ಹಜಾರಿ, ಶಶಿಕುಮಾರ ಪಾಟೀಲ ಸಂಗಮ, ಡಾ.ರಜನೀಶ್ ವಾಲಿ, ಭೀಮರಾವ್ ಪಾಟೀಲ ಡಿಗ್ಗಿ, ಸೂರಜ್‍ಸಿಂಗ್ ರಾಜಪೂತ್, ಶಿವಬಸಪ್ಪ ಚನ್ನಮಲ್ಲೆ, ವೀರಶೆಟ್ಟಿ ಪಟ್ನೆ, ಡಾ. ಮಹೇಶ ಬಿರಾದಾರ ಮೊದಲಾದವರು ಪಾಲ್ಗೊಂಡಿದ್ದರು.