ಚಿಂಚೋಳಿ: 41ನೇ ಬಿಜೆಪಿ ಸಂಸ್ಥಾಪನ ದಿನಾಚರಣೆ

ಚಿಂಚೋಳಿ,ಏ.6- ಇಲ್ಲಿನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ 41ನೇ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಿಜೆಪಿ ತಾಲೂಕ ಅಧ್ಯಕ್ಷ ಸಂತೋಷ್ ಗಡಂತಿ ಅವರು ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸ್ಥಾಪಿತ ಭಾರತೀಯ ಜನ ಸಂಘ 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡು ಇಂದಿಗೆ 41 ವರ್ಷ ಪೂರೈಸುತ್ತಿರು ಸುದಿನಾ ಎಂದರು.
ಹಿಂದುತ್ವ, ರಾಷ್ಟ್ರೀಯತೆ ರಾಷ್ಟ್ರೀಯ ಸುರಕ್ಷತೆ ಏಕಾತ್ಮ ಮಾನವತಾವಾದ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡು. ಹಿಂದುತ್ವ ಎಂಬುದು ಒಂದು ಮತವನ್ನು ಪ್ರತಿನಿಧಿಸುವುದಿಲ್ಲ ಬದಲಾಗಿ ರಾಷ್ಟ್ರೀಯತೆಯ ಪ್ರತೀಕ ಎಂಬ ಸಿದ್ದಾಂತ ಎಂಬುದನ್ನು ಸಾರಿ ಇಂದು ವಿಶ್ವದಲ್ಲೇ ಅತೀ ದೊಡ್ಡ ಪಕ್ಷ ವಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದರು.
ನಮ್ಮಂತಹ ಪ್ರತಿಯೊಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತರ ಶ್ರಮದ ಫಲ ಅವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದರು
ಈ ಸಂದರ್ಭದಲ್ಲಿ. ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ.. ಬಿಜೆಪಿ ಮುಖಂಡರಾದ ಅಶೋಕ ಚವ್ಹಾಣ. ರಾಜು ಪವಾರ. ಲಕ್ಷ್ಮಣ ಅವುಂಟಿ. ಶ್ರೀಮಂತ ಕಟ್ಟಿಮನಿ. ಶಿವಯೋಗಿ ರುಸ್ತಂಪುರ. ಪವನ ಕುಮಾರ ಗೋಪನಪಳ್ಳಿ. ಅಭೀಷೇಕ ಮಲಕನೂರ. ಅಂಬರೀಶ್ ಓಲಗಿರಿ. ಹಣಮಂತ ಗರಂಪಳ್ಳಿ. ಶ್ರೀನಿವಾಸ್ ಚಿಂಚೋಲಿಕರ. ಮತ್ತು ಅನೇಕ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು