
ಚಿಂಚೋಳಿ,ಜು 14- ಚಿಂಚೋಳಿ ತಾಲೂಕಿನ ಹೊಡೆಬೀರನಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಂ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ಸಂಭವಿಸಿದೆ.
ಹಾವು ಕಡಿತದಿಂದ ಸಾವನ್ನಪ್ಪಿದ ದುರ್ದೈವಿ ಮಹಿಳೆನರಸಮ್ಮ ಗಂಡ ನರಸಪ್ಪ (54) ಹೊಡೆಬೀರನಳ್ಳಿ ಎಂದು ಗುರುತಿಸಲಾಗಿದೆ.
ಮೃತ ಮಹಿಳೆ 14 ವರ್ಷದ ದಸ್ತಮ್ಮಾ ಮತ್ತು 11 ವರ್ಷದ ರಾಧಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.