ಚಿಂಚೋಳಿ: ಹಳ್ಳಿ ಹಳ್ಳಿಗೆ ಕುಮಾರಣ್ಣ

ಚಿಂಚೋಳಿ,ಸೆ.9- ಮನೆ ಮನೆಗೆ ಸಂಜು ಅಣ್ಣ 18ನೇ ದಿನದ ಪಾದಯಾತ್ರೆಯ ಸಂಧರ್ಭದಲ್ಲಿ ಕರ್ನಾಟಕ ಗಡಿ ಭಾಗವಾದ ಕುಂಚಾವರಂ ಭಾಗದ ಜವಾಹರ ನಗರ ತಾಂಡಾದ ಸ್ಥಳೀಯರು ಅಭುತಪೂರ್ವ ಸ್ವಾಗತವನ್ನು ಕೋರಿದರು.
ಜವಾಹರ ನಗರ ತಾಂಡಾದ ಎಲ್ಲಾ ಮುಖ್ಯ ರಸ್ತೆಯಲ್ಲಿ ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಆರ್ ಯಾಕಾಪೂರ ನೆತೃತ್ವದ ತಂಡ ದವರನ್ನು ತಾಂಡಾದಾಧ್ಯತ ಭವ್ಯ ಮೆರವಣಿಗೆ ಮುಖಾಂತರ ಶ್ರೀ ಸಂತ ಸೇವಾಲಾಲ ಮಂದಿರಕ್ಕೆ ಭೇಟಿ ಕೊಟ್ಟು ದರ್ಶನ ಪಡೆದುಕೊಂಡ ನಂತರ ಹನುಮಾನ್ ದೇವಸ್ಥಾನದ ಹತ್ತಿರ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ್ದರು.
ಸ್ಥಳೀಯ ಜನರೇ ಶ್ರೀ ಹೆಚ್ ಡಿ ಕುಮಾರಸ್ವಾಮಿಯವರ ಕಾರ್ಯಕ್ರಮಗಳ ಬಗ್ಗೆ ಗುಣಗಾನ ಮಾಡಿದರು ನಮ್ಮ ಜವಾಹರ ನಗರ ತಾಂಡಾದಲ್ಲಿ ಕೂಡ ಸಾಲಮನ್ನ ಸೌಲಭ್ಯ ಹಲವಾರು ರೈತರಿಗೆ ದೊರಕಿದೆ ಎಂದು ಹೇಳಿದರು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಹಾಗೂ ಸಂಜೀವನ್ ಯಾಕಾಪೂರ ರವರಿಗೆ ಜವಾಹರ ನಗರ ತಾಂಡಾದಿಂದ ಕೂಡ ಮತವನ್ನು ನೀಡುತ್ತೇವೆ ಎಂದು ರೈತರು ಹಾಗೂ ತಾಂಡಾದ ಪ್ರಮುಖರು ಭರವಸೆ ನೀಡಿದರು.
ಅಭ್ಯರ್ಥಿ ಸಂಜೀವನ್ ಯಾಕಾಪೂರ ಮಾತನಾಡಿ ವಿಧವೆಯರಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಇನ್ನಿತರರಿಗೆ ಮುಂಬರುವ ದಿನಗಳಲ್ಲಿ ಕುಮಾರಣ್ಣನವರು ಮುಖ್ಯಮಂತ್ರಿ ಯಾದರೆ ಪ್ರತಿ ತಿಂಗಳು 2000 ಮಾಶಾಸನ ನೀಡಲಾಗುತ್ತದೆ ಎಂದು ಹೇಳಿದರು. ಕಳೆದ ಬಾರಿ ಕೆಲವು ರೈತರು ಸಾಲಮನ್ನಾದಿಂದ ವಂಚಿತರಾಗಿದ್ದಾರೆ ಚಿಂಚೋಳಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಿ ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿಯಾದರೆ ಅಂತಹ ಎಲ್ಲಾ ರೈತರ ಸಾಲಮನ್ನಾ ಮಾಡಲಾಗುವುದೆಂದು ವಿವರಿಸಿದರು ಜೆಡಿಎಸ್ ಸರಕಾರ ಇಂದಿನಿಂದಲೂ ರೈತರು ಹಾಗೂ ಎಲ್ಲಾ ವರ್ಗದ ಜನರ ಹಿತಕಾಪಾಡುವಲ್ಲಿ ಮೊದಲ ಸ್ಥಾನದಲ್ಲಿದೆ ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಬೇಕೆಂದು ಬೇಡಿಕೊಂಡರು ಈ ಸಂಧರ್ಭದಲ್ಲಿ ಗೋಪಾಲ್ ಕಾರಬಾರಿ ಸಂತೋಷ್ ರಾಠೋಡ್ ಪ್ರೆಮ್ ಸಿಂಗ್ ತಾರಾಸಿಂಗ್ ನಾರಾಯಣ ಚಿನ್ನರಾಠೋಡ್ ಗೋಪಾಲ್ ಚವ್ಹಾಣ ತಾರಾಸಿಂಗ್ ಚವ್ಹಾಣ ಸುಭಾಷ ನಾಯಕ್ ಮೋಹನ್ ಚವ್ಹಾಣ ಗೊಬ್ರು ಚವ್ಹಾಣ ಈಶ್ವರ್ ಚವ್ಹಾಣ ರೂಪ್ ಸಿಂಗ್ ಚಿನ್ನ ರಾಠೋಡ್ ಹಾಗೂ ಜೆಡಿಎಸ್ ಅಧ್ಯಕ್ಷರಾದ ರವಿಶಂಕರ ರೆಡ್ಡಿ ಮುತ್ತಂಗಿ ಅಲ್ಪಸಂಖ್ಯಾತ ಅಧ್ಯಕ್ಷರಾದ ಸೈಯ್ಯದ್ ನಿಯಾಜ್ ಅಲಿ ಔಃಅ ಜಿಲ್ಲಾಧ್ಯಕ್ಷರಾದ ಹಣಮಂತ ಪೂಜಾರಿ ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ ಬಕ್ಕಪ್ರಭು ಪಾಟೀಲ್ ಜೆಡಿಎಸ್ ಕಾರ್ಯಧ್ಯಕ್ಷರಾದ ನೀಲಕಂಠ ಕೆ ಕೆ ಹಣಮಂತ ರೆಡ್ಡಿ ದೋಟಿಕೋಳ್ ಶ್ರೀನಿವಾಸ್ ಶಾದಿಪೂರ ಹೇಮಂತ್ ಶಾದಿಪೂರ ಚಿನ್ನಯ್ಯ ಶಾದಿಪೂರ ರಾಜು ಟೈಲರ್ ಶಾದಿಪೂರ ಸುರೇಂದ್ರ ಶಿವರೆಡ್ಡಿಪಲ್ಲಿ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು