ಚಿಂಚೋಳಿ ಸಿಡಿಪಿಓ ವಿರುದ್ಧ ಶಾಸಕರಿಗೆ ದೂರು

ಚಿಂಚೋಳಿ,ಜೂ.7- ಶಾಸಕರಾದ ಡಾ. ಅವಿನಾಶ ಜಾಧವ, ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಅಧ್ಯಕ್ಷರಾದ ಮಹದೇವಿ ಮತ್ತು ಸಂಘದ ಉಪಾಧ್ಯಕ್ಷರಾದ ಶಾಂತಾಬಾಯಿ ಅವರು ಮನವಿ ಸಲ್ಲಿಸಿದರು.
ಚಿಂಚೋಳಿ ಶಿಶು ಅಭಿವೃದ್ಧಿ ಯೋಜನೆಯಡಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶರಣಬಸಪ್ಪ ಬೆಳಗುಂಪಿ ರವರು, ಸಮಯಕ್ಕೆ ಸರಿಯಾಗಿ ಬಾರದೇ ಇರುವುದು, ಅಲ್ಲದೇ
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನಾವಾಡಿ ಸಹಾಯಕಿಯರಿಗೆ ಏಕವಚನದಲ್ಲಿ ಮಾತಾಡುವುದು
ಮಾಡುತ್ತಿದ್ದಾರೆ.
ಇಲಾಖೆಯಿಂದ ಸರಬರಾಜು ಮಾಡುತ್ತಿರುವ ಕೋಳಿ ಮೊಟ್ಟಗಳನ್ನು ಸಮಂಜಸವಾಗಿ ವಿತರಣೆ ಮಾಡದೇ
ಇರುವುದು, ಇಲಾಖೆಯಿಂದ ಸರಬರಾಜು ಮಾಡುವಂತಹ ಪೂರಕ ಪೌಷ್ಠಿಕ ಆಹಾರ ದಾಖಲಾತಿಗಳನ್ವಯ ವಿತರಣೆ ಮಾಡದೇ ಇರುವುದು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ
ಸಹಾಯಕರು ರಾಜ್ಯ ಮಟ್ಟದ ಹೋರಾಟಕ್ಕೆ ಹಾಜರಾಗಿದ್ದಕ್ಕೆ ಸುಮಾರು 10 ರಿಂದ 15 ದಿವಸಗಳ
ಗೌರವಧನವನ್ನು ತಡೆಹಿಡಿದಿರುತ್ತಾರೆ. ಈ ರೀತಿಯಾಗಿ ಕರ್ತವ್ಯ ನಿರ್ವಹಿಸಿದರೆ ನಾವು ಗೌರವಧನದ
ಆಧಾರದ ಮೇಲೆ ಕರ್ತವ್ಯ ನಿಭಾಯಿಸುವುದು ತುಂಬಾ ತೊಂದರೆಯಾಗುತ್ತಿದೆ. ಹಾಗೂ ಅಂಗನವಾಡಿ
ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಕುಂದು ಕೊರತೆಯ ಕುರಿತು ಕಛೇರಿಗೆ ಬಂದಾಗ,
ಕಛೇರಿಯಲ್ಲಿ ಇಲ್ಲದೇ ಇರುವುದು, ದೂರವಾಣಿಯ ಮೂಲಕ ಕರೆ ಮಾಡಿದಾಗ ಸ್ಪಂದಿಸದೇ ಇರುವುದು.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದಾಗ ಎಲ್ಲಾ
ನಮ್ಮ ಕೆಲಸಗಳು ಸರಳವಾಗಿ ಹಾಗೂ ಸಮಂಜಸವಾಗಿ ನಿರ್ವಹಿಸುತ್ತಿದ್ದರು. ಆದರೆ ಈ ಶಿಶು ಅಭಿವೃದ್ಧಿಯಿಂದ ನಮ್ಮ ಅಂಗನವಾಡಿ ಕಾರ್ಯಕರ್ತರಿಗೆ ತೊಂದರೆ ಆಗುತ್ತಿದ್ದು ಕೂಡಲೇ ಶಾಸಕರು ಅಂಗನವಾಡಿ ಕಾರ್ಯಕರ್ತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಅಧ್ಯಕ್ಷರಾದ ಮಹದೇವಿ ಮತ್ತು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ಉಪಾಧ್ಯಕ್ಷರಾದ ಶಾಂತಾಬಾಯಿ ಅವರು ಶಾಸಕರಾದ ಡಾ. ಅವಿನಾಶ ಜಾಧವ, ಅವರಿಗೆ ಮನವಿ ಮಾಡಿದ್ದಾರೆ.