ಚಿಂಚೋಳಿ: ಸಾರ್ವಜನಿಕ ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ

ಚಿಂಚೋಳಿ,ಡಿ.13- ಇಲ್ಲಿನ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ವೈಧ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗೆ ಒತ್ತಾಯಿಸಿ ತಾಲೂಕಾ ಹಿತ ರಕ್ಷಣ ಸಮಿತಿ ನೆತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಯಿತು.
ತಾಲೂಕು ಹಿತ ರಕ್ಷಣಾ ಸಮಿತಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ದಿನದಿಂದಲೂ ಅಧಿಕಾರಿಗಳ ವರ್ಗಾವಣೆ ದಂದೆ ಜೋರಾಗಿದ್ದು ಪಟ್ಟಣದ ಸರಕಾರಿ ಆಸ್ಪತ್ರೆಯ ವ್ಯಾಧ್ಯಧಿಕಾರಿಗಳಿಗೂ ವರ್ಗಾವಣೆಯಿಂದ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ಚಂದಾಪುರ ಆಸ್ಪತ್ರೆಯಲ್ಲಿ ಒಟ್ಟು ನೂರು ಹಾಸಿಗೆ ಒಳಗೊಂಡ ಆಸ್ಪತ್ರೆ ಇದ್ದು 600 ರಿಂದ 800 ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ವೈದ್ಯರ ಒಬ್ಬರೇ ಇದ್ದು ಅವರು ಕೂಡ ಆಸ್ಪತ್ರೆ ಆಡಳಿತ ಅಧಿಕಾರಿಯಾಗಿದ್ದು ಅವರು ರೋಗಿಗಳಿಗೆ ನೋಡಬೇಕು ಅಥವಾ ಆಸ್ಪತ್ರೆಯ ಜವಾಬ್ದಾರಿ ಎನ್ನು ಎಂದು ವೈದ್ಯರಿಗೆ ಗೊತ್ತಾಗುತ್ತಿಲ್ಲ ಏಕೆಂದರೆ ಸುಮಾರು 800 ಕ್ಕಿಂತ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರೋದ್ರಿಂದ ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ.
ಕೂಡಲೆ ಕಾಂಗ್ರೆಸ್ ಸರಕಾರವು ಚಂದಾಪುರ್ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಬೇಕು ಚಿಂಚೋಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಒಬ್ಬ ಮುಖಂಡರು ಹಿಂದಿನ ಸರ್ಕಾರವು ಇದ್ದಾಗ ಶಾಸಕರು ಮತ್ತು ಶಾಸಕರ ತಂದೆಯವರು ಆಸ್ಪತ್ರೆಯ ವೈದ್ಯರ ತರುವರಲ್ಲಿ ವಿಫಲವಾಗಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಕಾಂಗ್ರೆಸ್ ಪಕ್ಷದ ಮುಖಂಡರು ಒಂದು ಸರ್ತಿ ಆಸ್ಪತ್ರೆಗೆ ಬಂದು ನೋಡಲಿ ಆಸ್ಪತ್ರೆಯ ರೀತಿಯಾಗಿದೆ ಆಕ್ಸಿಜನ್ ಪ್ಲಾಂಟ್ ಮತ್ತು ಇನ್ನಿತರ ವಿವಿಧ ವಾಡ್ರ್ಗಳಿಗೆ ಭೇಟಿ ನೀಡಿ ಆಸ್ಪತ್ರೆ ಯಾ ರೀತಿ ಅಭಿವೃದ್ಧಿ ಮಾಡಿದ್ದಾರೆ ಅಂತ ನೋಡಬೇಕು ಬಿಜೆಪಿ ಪಕ್ಷದಲ್ಲೇ ಇದ್ದು ಹೀಗೆ ಕಾಂಗ್ರೆಸ್ ಹೋಗಿದ್ದೀರಿ ಯಾ ನೈತಿಕರಿಂದ ಹೇಳಿಕೆ ನೀಡಿದರು ಗೊತ್ತಾಗುತ್ತಿಲ್ಲ ಎಂದು ಗೋಪಾಲರಾವ್ ಕಟ್ಟಿಮನಿ, ಅವರು
ಹೇಳಿದರು ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಕೆ ಎಮ್ ಬಾರಿ, ಪ್ರೇಮ್ ಸಿಂಗ್ ಜಾಧವ, ಶ್ರೀಮಂತ ಕಟ್ಟಿಮನಿ,ಶಿವಯೋಗಿ ರುಸ್ತಾಪುರ್, ಭೀಮಶೆಟ್ಟಿ ಮುರುಡ, ಹಣಮಂತ ಪೂಜಾರಿ, ಸುರೇಶ ದೇಶಪಾಂಡೆ, ಸತೀಶ್ ರೆಡ್ಡಿ, ಮಹಾನಂದ್ ರೊಟ್ಟಿ,ನೀಲಾ, ಗಿರಿರಾಜ್ ನಾಟಿಕಾರ್, ಹಣಮಂತ ಭೋವಿ, ಮಂಜಲೇ, ಮಂಜೂರು ಅಹ್ಮದ್, ನಾರಾಯಣ್ ನಾಟಿಕಾರ್, ಶ್ರೀನಿವಾಸ್ ಚಿಂಚೋಳಿ ಮತ್ತು ಅನೇಕ ಹಿತ ರಕ್ಷಣೆ ಸಮಿತಿಯ ಸದಸ್ಯರು ಹಾಗೂ ಅನೇಕ ಮುಖಂಡರು ಭಾಗಿಯಾಗಿದ್ದರು.