
ಚಿಂಚೋಳಿ,ಜು.21- ಪಟ್ಟಣದಲ್ಲಿ ಸತತ ಕಳೆದ ಎರಡು ಮೂರು ದಿನಗಳಿಂದ ಸುರಿದ ಜಿಡಿ ಜಿಡಿ ಮಳೆಯಿಂದಾಗಿ ಪುರಸಭೆಯ ವ್ಯಾಪ್ತಿಯ ಕೆಲ ವಾರ್ಡುಗಳಲ್ಲಿ ಚರಂಡಿ ನೀರು ತುಂಬಿಕೊಂಡು ರಸ್ತೆಗಳ ಮೇಲೆ ಹರಿಯುತ್ತಿದೆ.
ಇಂದು ಬೆಳಗ್ಗೆ ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನ್ನಿ, ಅವರು, ಮಳೆನೀರಿನಿಂದ ತೊಂದರೆಗೆ ಒಳಗಾಗಿರುವ ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲಿಸಿದರು, ಅಲ್ಲಿನ ಜನರ ಕುಂದು ಕೊರತೆಗಳನ್ನು ಆಲಿಸಿದರು.
ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಚಿಂಚೋಳಿ ಮತ್ತು ಚಂದಾಪುರ ಪಟ್ಟಣದ ಎಲ್ಲಾ ನಾಗರಿಕರು ತಮ್ಮ ತಮ್ಮ ಮನೆಯಲ್ಲಿ ಕುಡಿಯುವ ನೀರನ್ನು ಕಾಯಿಸಿ ಹಾರಿಸಿದ ನಂತರ ಕುಡಿಯಬೇಕು ಏಕೆಂದರೆ ಸತತ ಮಳೆಯಿಂದಾಗಿ ಕುಡಿಯುವ ನೀರು ಕಲುಶಿತಗೊಳ್ಳಲಿದ್ದು, ಇದರಿಂದ ಸಾಂಕ್ರಮಿಕ ರೋಗಗಳು ಹರಡುವ ಸಾದ್ಯತೆ ಇರುತ್ತವೆ ಹೀಗಾರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಸತತ ಮಳೆಯಿದ್ದ ಕಾರಣ ರೈತರು ತಮ್ಮ ದನ ಮತ್ತು ಕರುಗಳನ್ನು ಯಾರು ಕೂಡ ಇಲ್ಲ ಮರಿ ನದಿಯ ಹತ್ತಿರ ಹೋಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಸತತ ಮಳೆಯಿಂದ ಪುರಸಭೆ ಕೆಲವಾಡಗಳಲ್ಲಿ ಮನೆ ಕುಸಿದು ಆ ಮನೆಗಳಿಗೂ ಕೂಡ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.