ಚಿಂಚೋಳಿ: ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ

ಚಿಂಚೋಳಿ,ಡಿ.31:ಇಲ್ಲಿನ ಚಂದಾಪುರ ಪಟ್ಟಣದ ಶ್ರೀಮತಿ ಚೆನ್ನಮ್ಮ ಬಸಪ್ಪ ಪಾಟೀಲ್ ಕಾಲೇಜಿನಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಜೆವಾಣಿ ಪತ್ರಿಕೆಯ 2021ನೇ ಹೊಸ ವರ್ಷದ ಕ್ಯಾಲೆಂಡರನ್ನು ತಾಲೂಕ ಪಂಚಾಯತ ಅಧ್ಯಕ್ಷರಾದ ರೇಣುಕಾ ಅಶೋಕ ಚವಾಣ್ ಅವರು ಬಿಡುಗಡೆ ಮಾಡಿದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಅನೀಲಕುಮಾರ ರಾಠೋಡ. ತಾಲೂಕು ಪಂಚಾಯತ ಸದಸ್ಯರಾದ ಪ್ರೆಮಿಸಿಂಗ್ ಜಾಧವ್. ಬಿಜೆಪಿಯ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ. ಶ್ರೀಮಂತ ಬಿ ಕಟ್ಟಿಮನಿ. ಸಂಸದರ ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಚಿಂಚೋಲಿಕರ್. ಚೆನ್ನಮ್ಮ ಬಸಪ್ಪ ಪಾಟೀಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಶೈಲ ನಾಗರಾಳ ಮತ್ತು ಪತ್ರಿಕೆಯ ವರದಿಗಾರ ಸಂಜೀವಕುಮಾರ ಪಾಟೀಲ. ಸೇರಿದಂತೆ ನೂತನ ಗ್ರಾಮ ಪಂಚಾಯತ ಸದಸ್ಯರು ಇದ್ದರು.