ಚಿಂಚೋಳಿ: ಶ್ರೀನಿಜಶರಣ ಅಂಬಿಗ ಚೌಡಯ್ಯ ಜಯಂತೋತ್ಸವ

ಚಿಂಚೋಳಿ,ಜ.22- ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನಿಜ ಶರಣ ಅಂಬಿಗ ಚೌಡಯ್ಯ ಅವರ 904 ನೇಯ ಜಯಂತಿ ಕಾರ್ಯಕ್ರಮದ ಭವ್ಯ ಮೆರವಣಿಗೆಗೆ ಇಲ್ಲಿನ ಲಕ್ಷ್ಮಿ ಮಂದಿರದಲ್ಲಿ ಚಾಲನೆ ನೀಡಲಾಯಿಇತು.
ಈ ಭವ್ಯ ಮೆರವಣಿಗೆಯಲ್ಲಿ ನಿಜ ಶರಣ ಅಂಬಿಗ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಹಾಗೂ ವಿಠ್ಠಲ್ ಹೇರೂರ್ ಭಾವಚಿತ್ರವನ್ನು ಅಳವಡಿಸಲಾಗಿತ್ತು.
ಮೆರವಣಿಗೆ ಮುನ್ನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೋಲಿ ಸಮಾಜದ ಅಧ್ಯಕ್ಷರಾದ ಅನೀಲಕುಮಾರ ಜಮಾದಾರ ಹುಡದಳ್ಳಿ, ಅವರು, ಕ್ಷೇತ್ರದದ ಶಾಸಕರಾದ ಡಾ. ಅವಿನಾಶ್ ಜಾಧವ್, ಮತ್ತು ಕಲಬುರ್ಗಿ ಲೋಕಸಭೆಯ ಸದಸ್ಯರಾದ ಡಾ. ಉಮೇಶ ಜಾಧವ್, ಕಳೆದ ವಿಧಾನಸೌಧ ಚುನಾವಣೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ತಮ್ಮ ವತಿಯಿಂದ ಮಾಡಿಕೊಡುತ್ತೇನೆ ಎಂದು ಕಾಮಗಾರಿ ತರಾತುರಿಯಲ್ಲಿ ಮಾಡಿದ್ದು, ಚುನಾವಣೆ ಮುಗಿದ ನಂತರ ಕಾಮಗಾರಿ ಸಹ ತಗೊಂಡಿತು ಕೋಲಿ ಸಮಾಜದ ಬಾಂಧವರು ನನಗೆ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ಬಗ್ಗೆ ಕೇಳುತ್ತಿದ್ದಾರೆ ಅದರಿಂದ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್, ಮತ್ತು ಕಲಬುರ್ಗಿ ಲೋಕಸಭೆಯ ಸದಸ್ಯರಾದ ಡಾ. ಉಮೇಶ ಜಾಧವ, ಅವರೇ ಕೂಡಲೇ ಆರು ತಿಂಗಳ ಒಳಗಾಗಿ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ ಮಾಡಬೇಕು ಒಂದು ವೇಳೆ ನಿರ್ಮಾಣ ಮಾಡದಿದ್ದರೆ ಕೋಲಿ ಸಮಾಜ ಬಾಂಧವರು ಪ್ರತಿ ಮನೆಗಳಿಂದ ಹಣಸಂಗ್ರಹಿಸಿ ನಮ್ಮ ಸಮಾಜ ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದ ಅವರು, ಮುಂಬರುವ ದಿನಗಳಲ್ಲಿ ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು ಎಂಬಂತೆ ಕೋಲಿ ಸಮಾಜದ ವತಿಯಿಂದ ದಾರಿತಪ್ಪಿಸಿದವರಿಗೆ ತಕ್ಕ ಪಾಠ ಕಲಸಬೇಕಾಗುತ್ತದೆ ಎಂದು ಅನೀಲಕುಮಾರ ಜಮಾದಾರ ಹುಡದಳ್ಳಿ, ಹೇಳಿದರು
ಕಾರ್ಯಕ್ರಮದಲ್ಲಿ ತಹಸಿಲ್ದಾರ ಸುಬ್ಬಣ್ಣ ಜಮಖಂಡಿ, ಕಾಶಿನಾಥ ಧನ್ನಿ, ಡಿ ಬಸವರಾಜ, ಅನುಸೂಯಾ ಚೌವ್ಹಾನ್, ಕೋಲಿ ಸಮಾಜದ ಮುಖಂಡರಾದ ಲಕ್ಷ್ಮಣ ಆವುoಟಿ, ಚಂದ್ರಕಾಂತ ಘಾಲಿ, ಅಶೋಕ ಹೂವಿನಬಾವಿ, ಸುರೇಶ್ ಭ0ಟ್ಟಾ, ಮತ್ತು ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಕೋಲಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು