ಚಿಂಚೋಳಿ: ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ

ಚಿಂಚೋಳಿ,ಮಾ.6- ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿಡುಗುಂದ ಶ್ರೀಗಳು ಮತ್ತು ಚಂದನ ಕೇರ ಶ್ರೀಗಳು ಹಾಗೂ ತಹಸಿಲ್ದಾರ್ ವೆಂಕಟೇಶ ದುಗ್ಗನ, ಪುರಸಭೆ ಅಧಿಕಾರಿಗಳಾದ ಕಾಶಿನಾಥ್ ಧನಿ, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವೀರಶೈವ ಲಿಂಗಾಯ ಸಮಾಜದ ಮುಖಂಡರು ಜಯಂತಿಯಲ್ಲಿ ಭಾಗಿಯಾಗಿದ್ದರು.