
ಚಿಂಚೋಳಿ,ಮಾ.7- ಸಾರ್ವಜನಿಕರು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಚಿಂಚೋಳಿ ನಗರ ಸೇರಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಡಿವೈಎಸ್ಪಿ ರುದ್ರಪ್ಪಾ ಉಜ್ಜನಕೊಪ್ಪ ಕರೆಕೊಟ್ಟರು.
ಅವರು ಪಟ್ಟಣದ ಪೆÇಲೀಸ ಠಾಣೆಯಲ್ಲಿ ಏರ್ಪಡಿಸಿದ ಸಾರ್ವಜನಿಕ ಶಾಂತಿ ಸಭೆಯ ನೇತೃತ್ವವಹಿಸಿ ಮಾತನಾಡುತ್ತಿದ್ದರು.
ಚಿಂಚೋಳಿ ತಾಲೂಕಾ ಸೌಹಾರ್ದತೆಯ ಬೀಡಾಗಿದೆ ಹಿಂದೂ ಮುಸ್ಲಿಂ ಎನ್ನದೇ ಎಲ್ಲರೂ ಭಾವೈಕ್ಯತೆಯಿಂದ ಇದ್ದು ಭಾಯಿ ಭಾಯಿಗಳಂತೆ ಬದುಕಿ ಇತರರಿಗೆ ಮಾದರಿ ಯಾಗೋಣವೆಂದರು.
ಹೋಳಿ ಹಬ್ಬದಿನದಂದು ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಾಗೂ ಇತರರು ಆಸ್ಪತ್ರೆಗೆ ಹೋಗುತ್ತಾರೆ ಅಂಥಹ ಸಮಯದಲ್ಲಿ ಸಾರ್ವಜನಿಕರ ಮೇಲೆ ಬಣ್ಣ ಎರಚುವುದಾಗಲಿ ಅವರೊಂದಿಗೆ ಜಗಳಲ್ಲಕೆ ಇಳಿಯುವಂತ ಕೆಲಸ ಮಾಡಬಾರದು ಎಂದ ಸಲಹೆ ನೀಡಿದರು.
ಕೆಲವರು ಸಾರ್ವಜನಿಕರ ಜೊತೆ ದುರ್ನಡತೆಗೆ ಹಾಗೂ ದುಸ್ಸಾಹಕ್ಕೆ ಕೈಹಾಕುತ್ತಾರೆ ಇಂತಹ ಚಟುವಟಿಕೆಗಳು ನಡೆದರೆ ಇಲಾಖೆ ಕಣ್ಮುಚ್ಚಿ ಕುಳಿತುಕೊಳ್ಳುವುದಿಲ್ಲ ಇಂತಹವರ ವಿರುದ್ಧ ಮುಲಾಜಿಯಿಲ್ಲದೇ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಅವರು ಕಿಡಿಗೇಡಿಗಳಿಗೆ ಎಚ್ಚರಿಕೆ £ಮತ್ತು ಚಾಟಿ ಬೀಸಿದರು.
ಈ ಶಾಂತಿ ಸಭೆಯನ್ನುದ್ದೇಶಿಸಿ ಮುಖಂಡರಾದ ಓಮಕಾರ ಕೊರವಿ ಆರ್.ಗಣಪತರಾವ ಶ್ರೀಹರಿ ಕಾಟಾಪೂರ ನಾಗರಾಜ ಮಲಕೂಡ ಕೆ.ಎಮ್.ಬಾರಿ ಅಬ್ದುಲ್ ಬಾಸೀತ ರೇವಣಸಿದ್ಧ ಮೋಘಾ ಸೇರಿದಂತೆ ಇತರರು ಮಾತನಾಡಿ ಶಾಂತಿಯ ಮಂತ್ರ ಪಠಿಸಿದರು
ಸಭೆಯಲ್ಲಿ ಚಿಂಚೋಳಿ ಸಿಪಿಐ ಅಮರಪ್ಪಾ ಶಿವಬಲ್ಲ ಸೇಡಂ ಸಿಪಿಐ ಸಂದೀಪ ಸಿಂಗ್ ಮುರಗೋಡ್ ಪಿಎಸ್‍ಐ ಮಹೇಬೂಬ ಅಲಿ, ಮತ್ತು ಅನೇಕ ವಿವಿಧ ಪಕ್ಷದ ಮುಖಂಡರು ಹಾಗೂ ಪೆÇಲೀಸ್ ಸಿಬ್ಬಂದಿಗಳು ಇದ್ದರು