ಚಿಂಚೋಳಿ ವೀರಶೈವ ಲಿಂಗಾಯತ ಸಮಾಜ: ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರುಣಕುಮಾರ ಪಾಟೀಲ

ಚಿಂಚೋಳಿ,ಸೆ.21- ಇಲ್ಲಿನ ತಹಸಿಲ್ ಕಾರ್ಯಾಲಯ ಅವನದ ದೇವರಾಜ್ ಅರಸು ಭವನದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡ ವೀರಶೈವ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಮಾಜದ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಉಪಾಧ್ಯಕ್ಷರ,ಸಮಾಜದ 4 ಜನ ವೈದ್ಯರಾದ ಡಾ ಸಿದ್ದರಾಜು ಕೇಶ್ವರ್, ಡಾ. ಸಂತೋಷ್ ಪಾಟೀಲ್, ಡಾ, ಬಸವೇಶ್ವರ ಪಾಟೀಲ್, ಡಾ. ಮಂಜುನಾಥ ಜಾಪಟ್ಟಿ, ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮಕ್ಕೆ ಕಲ್ಬುರ್ಗಿ ವೀರಶೈವ ಸಮಾಜದ ಜಿಲ್ಲಾ ಅಧ್ಯಕ್ಷರಾದ ಡಾ.ಅರುಣ ಕುಮಾರ ಎಸ್ ಪಾಟೀಲ ಕೊಡಲಹಂಗರಗ, ಅವರು ಸಸಿಗೆ ನೀರು ಹಾಕುವ ಮುಖಾಂತರ ಚಾಲನೆ ನೀಡಿದರು.
ಕÀಲ್ಬುರ್ಗಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜ ವಿದ್ಯಾರ್ಥಿಗಳಿಗಾಗಿ ಅನೇಕ ಕಾಲೇಜು ಹಾಸ್ಟೆಲ್ ಗಳು ಈಗಾಗಲೇ ಸಮಾಜ ವತಿಯಿಂದ ತೆಗೆಯಲಾಗಿದ್ದು ಚಿಂಚೋಳಿ ತಾಲೂಕಿನ ವಿದ್ಯಾರ್ಥಿಗಳು ಈ ಎಲ್ಲಾ ಹಾಸ್ಟೆಲಗಳಲ್ಲಿ ಪ್ರವೇಶ ಪಡೆಯುವ ಮೂಲಕ ಸದುಪಯೋಗಪಡಿಸಿಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಿ ತಂದೆತಾಯಿ ಮತ್ತು ಸಮಾಜಕ್ಕೆ ಕೀರ್ತಿಯನ್ನು ತರಬೇಕು ಎಂದು ಕರೆ ನೀಡಿದರು.
ಕಲ್ಬುರ್ಗಿ ವೀರಶೈವ ಲಿಂಗಾಯತ ಸಮಾಜವು ಯಾವತ್ತಿಗೂ ಚಿಂಚೋಳಿ ತಾಲೂಕಿನ ಸಮಾಜದ ಬಾಂಧವರ ಜೊತೆಗಿರುತ್ತದೆ ಯಾವುದೇ ಸಮಸ್ಯೆ ಆದರೂ ಕೂಡ ಜಿಲ್ಲಾ ವೀರಶೈವ ಸಮಾಜವು ನಿಮ್ಮ ಜೊತೆಗೆ ಇದ್ದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ. ಷ.ಬ್ರ. ಕರುಣೇಶ್ವರ ಶಿವಾಚಾರ್ಯರು ನಂದಿಶ್ವರ ಮಠ ಕಂಚಾಳಕುಂಟಿ, ನಿಡಗುಂದಾ, ಪೂಜ್ಯ ಶ್ರೀ. ಷ.ಬ್ರ. ವಿಜಯಮಹಾಂತ ಶಿವಾಚಾರ್ಯರು ಸಿದ್ಧರಾಮೇಶ್ವರ ಹಿರೇಮಠ, ಚಿಮ್ಮಾಣದಲಾಯಿ, ಶ್ರೀ ಮ.ನಿ.ಪ್ರ.ಸಿದ್ದಾರಾಮ.ಮಾಹಾ.ಸ್ವಾಮಿಗಳು.ವೀರಕ್ತಮಠ ರಟಕಲ, ಕಲ್ಬುರ್ಗಿ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶ್ರೀಶೈಲ ಘೂಳಿ, ಕಲ್ಬುರ್ಗಿ ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಂಗಮೇಶ ನಾಗನಹಳ್ಳಿ, ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾದ ರಮೇಶ್ ಪಡೆಶೆಟ್ಟಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ ಪೆÇೀಲಕಪಳ್ಳಿ, ರೇವಣಸಿದ್ದಪ್ಪ ದಾದಾಪೂರ್, ಸೋಮಯ್ಯ ಮಠಪತಿ, ಬಸವರಾಜ ಬೆಳಕೇರಿ, ವೀರೇಶ ದೇಸಾಯಿ, ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ, ಹಿಂದುಳಿದ ವರ್ಗ ಕಲ್ಯಾಣ ಅಧಿಕಾರಿಗಳಾದ ಅನುಸೂಯ ಚವ್ಹಾಣ, ಕಾಶಿನಾಥ ಮಡಿವಾಳ, ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು