ಚಿಂಚೋಳಿ: ವಿದ್ಯಾರ್ಥಿಗಳಿಗೆ ನೊಟಬುಕ್-ಪೆನ್ನು ವಿತರಣೆ

ಚಿಂಚೋಳಿ,ಜ.18- ಪಟ್ಟಣದ ಚಂದಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ದಿವಂಗತ ಜಗನ್ನಾಥ ಪಾಟೀಲ್ ಅವರ 13ನೇ ವರ್ಷದ ಪುಣ್ಯತಿಥಿ ಅಂಗವಾಗಿ ಶಾಲೆಯ ಮಕ್ಕಳಿಗೆ ನೊಟ್ ಬುಕ್- ಪೆನ್ನು ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಸಂಜೀವನ್ ಯಾಕಾಪೂರ ಅವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚಿಂಚೋಳಿ ಪಿಎಸ್‍ಐ ಹನುಮಂತ ಅವರು, ತಂದೆ ತಾಯಿಗೆ ನಾವೆಲ್ಲರೂ ದೇವರನ್ನುತ್ತೇವೆ ಆದರೆ ನಾವೇ ತಂದೆ ತಾಯಿಯ ಮಾತುಗಳನ್ನು ಕೇಳಲ್ಲ ಉಲ್ಟಾ ತಂದೆ ತಾಯಿಯವರಿಗೆ ಎದುರಾಡುತ್ತೀವಿ ಅದು ನಮಗೆ ಒಳ್ಳೆದಲ್ಲ ನಾವೆಲ್ಲರೂ ತಂದೆ ತಾಯಿಗಳ ಮಾತುಗಳನ್ನು ಕೇಳಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ತಂದೆ ತಾಯಿ ತಮ್ಮ ಮಕ್ಕಳ ಪಾಲನೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿ ಇಡುತ್ತಾರೆ. ಅವರು, ನಮ್ಮ ಭವಿಷ್ಯ ರೂಪಿಸಲು ಶಾಲೆಗೆ ಕಳಿಸಿದ್ದಾರೆ. ಚನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಪಡೆದು ಕುಟುಂಬಕ್ಕೆ, ಶಾಲೆ ಮತ್ತು ನಾಡಿಗೆ ಕರ್ತಿ ತರುವಂತೆ ಶುಭ ಹಾರೈಸಿದ ಅವರು, ತಮ್ಮ ತಂದೆ ತಾಯಿ ಮತ್ತು ಗುರುಗಳ ಮಾತನ್ನು ಕೇಳುವ ಮೂಲಕ ತಾವುಗಳು ಭವಿಷ್ಯವನ್ನು ರೂಪಿಸಿಕೊಳ್ಳುವುದಾಗಗಿ ತಾವೇಲ್ಲರೂ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು.
ಸಂಜೀವ ಕುಮಾರ್ ಪಾಟೀಲ್, ಅವರ ತಂದೆಯ ಪುಣ್ಯತಿಥಿಯಾದ ಇಂದು ಮಕ್ಕಳಿಗೆ ನೊಟ್ ಬುಕ್ ಪೆನ್ನು ವಿತರಣೆ ಮಾಡುತ್ತಿರುವುದು ಒಳ್ಳೆಯ ಕೆಲಸ ಏಕೆಂದರೆ ಶಿಕ್ಷಣ ಮತ್ತು ಪೆನ್ನಿನಲ್ಲಿರುವ ಶಕ್ತಿ ಬೇರೆಯಲ್ಲಿರೂ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಕೆ.ಎಂ ಬಾರಿ, ಅವರು ಮಾತನಾಡಿ ದಿವಂಗತ ಜಗನ್ನಾಥ್ ಪಾಟೀಲ್ ಅವರು, ಸುಮಾರು ವರ್ಷಗಳ ಹಿಂದೆ ಚಿಂಚೋಳಿ ನಗರದಲ್ಲಿ ಜ್ಯೋತಿ ಫೆÇೀಟೋ ಸ್ಟುಡಿಯೋ ಪ್ರಾರಂಬಿಸಿದ್ದರು ಇದೊಂದೇ ಇತ್ತು ಅಂದಿನ ಸಂದರ್ಭದಲ್ಲಿ ಜಗನ್ನಾಥ್ ಪಾಟೀಲ್ ಅವರು ಫೆÇೀಟೋಗ್ರಾಫಿಕ್ ನಲ್ಲಿ ಒಳ್ಳೆ ಸೇವೆಯನ್ನು ನೀಡಿದ್ದಾರೆ ಅದೇ ರೀತಿ ಅವರ ಮಗನಾದ ಸಂಜೀವಕುಮಾರ ಪಾಟೀಲ್ ಅವರು ಕೂಡ ಒಳ್ಳೆಯ ರೀತಿಯಿಂದ ಪತ್ರಿಕರ್ತರಾಗಿ ಮತ್ತು ಸಮಾಜ ಸೇವಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೆ.ಎಂ ಬಾರಿ, ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆನಂದ ಟೈಗರ್, ಹಿರಿಯ ಮುಖಂಡರಾದ ಭೀಮಶೆಟ್ಟಿ ಮುರುಡ, ಮಾರುತಿ ಗಂಜಿಗಿರಿ, ಸುಧಾಕರ್ ಪಾಟೀಲ್, ಹನುಮಂತ ಭೋವಿ, ಶಂಕರ್ ರಾತೋಡ್, ಆನಂದ್ ರೆಡ್ಡಿ ಚಿಂತಲ್, ಜಯಶಂಕರ್ ಸೋಮನಿಂದಳ್ಳಿ, ಸಂಜೀವಕುಮಾರ್ ಪಾಟೀಲ್, ಶಾಲೆಯ ಮುಖ್ಯ ಗುರುಗಳಾದ ರಘುನಾಥ, ಮತ್ತು ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು