ಚಿಂಚೋಳಿ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

ಚಿಂಚೋಳಿ,ಮಾ.1- ಪಟ್ಟಣದ ಭಾರತಿ ವಿದ್ಯಾನಿಕೇತನ್ ಇಂಟನ್ರ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ ಸಂತೋಷ್ ಪಾಟೀಲ್ ಅವರು, ತಮ್ಮ ಜ್ಞಾನ ಮತ್ತು ಮನಸ್ಸಿನಲ್ಲಿರುವ ವಿಚಾರವನ್ನು ಈ ವಸ್ತು ಪ್ರದರ್ಶನ ಮುಖಾಂತರ ತಮ್ಮ ಪ್ರತಿಭೆಯನ್ನು ಹೊರಹಾಕಿ ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ , ನಿರಂತರವಾದ ಕಲಿಕೆಯಿಂದ ಮಕ್ಕಳ ಕನಸು ನಿಜರೂಪ ಮಾಡಲು ಇಂಥ ವಸ್ತು ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ಉಜ್ವಲ ಭವಿಷ್ಯಕ್ಕೆ ಇದು ಒಳ್ಳೆಯ ದಾರಿ ಇಂತ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಜಟ್ಟಪ್ಪ .ಬೇಲೂರ ಅಬಕಾರಿ ಸಿಪಿಐ ಅವರು ಮಾತನಾಡಿ, ನಾವು ಕಲಿಯುವ ಸಂದರ್ಭದಲ್ಲಿ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಆಗುತ್ತಿರಲಿಲ್ಲ ಆದರೆ ಇಂಥ ಒಳ್ಳೆಯ ವಸ್ತು ಪ್ರದರ್ಶನ ಗಳಿಂದ ಮಕ್ಕಳ ಬುದ್ಧಿಶಕ್ತಿ ಮಟ್ಟ ಹೆಚ್ಚಾಗಿ ಇನ್ನು ಹೆಚ್ಚಿನ ವಿಜ್ಞಾನ ವಸ್ತು ಪ್ರದರ್ಶನವನ್ನು ನಡೆಯಬೇಕು ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ತೋರಿಸಲು ಇಂತಹ ಕಾರ್ಯಕ್ರಮ ಗಳು ಮಾದರಿ, ಮಕ್ಕಳ ತಮ್ಮ ಉಜ್ವಲ ಭವಿಷ್ಯಕ್ಕೆ ಇಂಥ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಒಳ್ಳೆಯ ಪ್ರಾಯತ್ನದಿಂದಲೇ ಒಳ್ಳೆಯ ಫಲ ಸಿಗುವುದು ಎಂದು ಹೇಳಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಸಿ ಆರ್ ಸಿ ಮೀನಾಕ್ಷಿ ಶಾಲೆಯ ಟ್ರಸ್ಟಿ ಸದಸ್ಯರಾದ ಶಂಕರ್ ರಾಠೋಡ್ ಮಾತನಾಡಿದರು. ಈ ಶಾಲೆಯ ಚಿಕ್ಕ ಮಕ್ಕಳಿಂದ ವಿವಿಧ ಬಗೆಯ ವಿಜ್ಞಾನ ವಸ್ತು ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನುಭವಿ ಪತ್ರಕರ್ತರಾದ ಎಂ.ಪಿ ರಾಮರಾವ್ ಚಾಂದ್ ಪಾಷಾ, ಶಾಲೆಯ ಮುಖ್ಯೋಪಾಧ್ಯಾಯರಾದ ಮಮತಾ ಶೆಟ್ಟಿ, ಶಿಕ್ಷಕಿಯರಾದ ಶಾಹಿನ್, ರೋಹಿಣಿ ರಾಜೇಂದ್ರ ಪ್ರಸಾದ್, ಅಶ್ವಿನಿ, ಜಗದೇವಿ, ಪ್ರತ್ಯೀಕ್ಷಾ, ಸಿಬ್ಬಂದಿಗಳಾದ ಮಂಜುಳಾ, ಮಲ್ಲಮ್ಮ, ಮಸ್ತಾನ್, ಮಕ್ಕಳ ಪೆÇೀಷಕರು ಹಾಗೂ ನೂರಾರು ಮಕ್ಕಳು ಉಪಸ್ಥಿತರಿದ್ದರು.