ಚಿಂಚೋಳಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಚಿಂಚೋಳಿ,ಜು.20- ಪಟ್ಟಣದ ಚಂದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ವೀರಶೈವ ಸಮಾಜ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವೀತರಿಸುವ ಮೂಲಕ ಕಲಬುರ್ಗಿ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಡಾ.ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಅವರ 52ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲವನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಕ ಅಧಿಕಾರಿಗಳಾದ ಹಂಪಣ್ಣ ನಾಯಕ್, ಅಬಕಾರಿ ಇಲಾಖೆ ಅಧಿಕಾರಿಗಳಾದ ಜಟ್ಟೆಪ್ಪ, ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹಮ್ಮದ್ ಗಫರ್, ಚಂದಾಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಸಂತೋಷ್ ಪಾಟೀಲ್, ವೀರಶೈವ ಲಿಂಗಾಯತ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ವೀರಶೈವ ಸಮಾಜದ ಮುಖಂಡರಾದ ಆನಂದ ಹಿತ್ತಲ, ಕಾಶಿನಾಥ್ ಹುನಜೆ, ರಮೇಶ್ ಹುಡುಗಿ, ಬಸವರಾಜ್ ಗಡಂತಿ, ಸತೀಶರೆಡ್ಡಿ ತಾಜಲಾಪೂರ, ಪವನ್ ಪಾಟೀಲ್ ಹುಡದಳ್ಳಿ, ಶಿವು ಸ್ವಾಮಿ ಮಠ ಮಲ್ಲಿನಾಥ್ ಮೇಲಗಿರಿ, ಸಂಜು ಪಾಟೀಲ್ ಯ0ಪಳ್ಳಿ, ಸಂಪತ್ ಮುಸ್ತರಿ, ಜಗ್ಗು ಸಾಲಿಬೀರನಳ್ಳಿ, ಸಂತೋಷ್ ಪಾಟೀಲ ಬೇಕರಿ, ಜಗನ್ನಾಥ ಜಾಬಶೆಟ್ಟಿ, ವಿಜಯ ಕುಮಾರ್ ಬಿರಾದರ್ ಹುಡದಳ್ಳಿ, ರೇವಣಸಿದ್ದಪ್ಪ ತಡಕಲ್, ಮತ್ತು ಅನೇಕ ವೀರಶೈವ ಸಮಾಜದ ಮುಖಂಡರು ಇದ್ದರು.