ಚಿಂಚೋಳಿ: ರಸ್ತೆ ಸುರಕ್ಷಾ ನಿಯಮ ಪಾಲಿಸಲು ಕರೆ

ಚಿಂಚೋಳಿ,ಆ.6- ಇಲ್ಲಿನ ಪೆÇಲೀಸ್ ಠಾಣೆಯ ಸಿಪಿಐÀ ಅಂಬರಾಯ ಕಾಮಾನಮನಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಜಿಲ್ಲಾ ಪೆÇಲೀಸ್ ರಸ್ತೆ ಸುರಕ್ಷತಾ ನಿಯಮ ಜಾಗೃತಿ ರ್ಯಾಲಿ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಕುರಿತು ಪ್ರಚಾರ ಆಂದೋಲನ ಕೈಗೊಳ್ಳಲಾಯಿತು.
ಪಟ್ಟಣದ ಆಟೋ ಚಾಲಕರಿಗೆ ಹಾಗೂ ವಾಹನ ಚಾಲಕರಿಗೆ ಮತ್ತು ಚಿಂಚೋಳಿ, ಚಂದಾಪುರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಡ್ಡಾಯವಾಗಿ ಎಲ್ಲರೂ ತಮ್ಮ ಹತ್ತಿರ ಯಾವುದೇ ಗಾಡಿ ಇದ್ದರೂ ಕೂಡ ಮೊದಲಿಗೆ ತಮ್ಮ ಲೈಸೆನ್ಸ್ ಮತ್ತು ಗಾಡಿಯ ಇನ್ಸೂರೆನ್ಸ್ ಹಾಗೂ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ದ್ವಿಚÀಕ್ರ ವಾಹನದವರು ಹಲಿಮೆಂಟ್ ಧರಿಸಿ ವಾಹನವನ್ನು ಚಲನೆ ಮಾಡಿ ತಮ್ಮ ಜೀವನವನ್ನು ತಾವೇ ಕಾಪಾಡಿಕೊಳ್ಳಬೇಕೆಂದು ತಿಳಿ ಹೇಳಲಾಯಿತು.
ರಸ್ತೆ ಸುರಕ್ಷತೆಯ ಕುರಿತು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡಬೇಕು ಎಂದು ಸಿಪಿಐ ಕರೆ ನೀಡಿದರು.