ಚಿಂಚೋಳಿ ರಸ್ತೆ : ಸಾವು ನುಂಗುಲು ಬಾಯಿ ತೆರೆದು ನಿಂತ ತೆಗ್ಗುಗುಂಡಿಗಳು!

ಸೇಡಂ,ಜು,08: ತಾಲೂಕಿನ ಚಿಂಚೋಳಿ ರಸ್ತೆಯ ಕಮಲಾವತಿ ನದಿಯ ಬ್ರಿಜ್ ಮೇಲೆ ಬ್ರಹತ್ ಪ್ರಮಾಣದ ತೆಗ್ಗು ಗುಂಡಿ ಬಾಯಿ ತೆರೆದು ನಿಂತಿದ್ದು ಹಾಗೂ ಚಿಂಚೋಳಿ ರಸ್ತೆಯ ಉದ್ದಕ್ಕೂ ತೆಗ್ಗುಗುಂಡಿಗಳು ಇವೆ.
ರಾತ್ರಿಯಲ್ಲಿ ತಿರುಗಾಡುವ ದ್ವಿಚಕ್ರ, ಇನ್ನಿತರ ವಾಹನ ಸವಾರರ ಸಾವು ನುಂಗುಲು ಕಾದು ನಿಂತಂತೆ ಕಾಣಿಸುತ್ತಿದ್ದು ಸಂಬಂಧಪಟ್ಟ ತಾಲೂಕ ಅಧಿಕಾರಿಗಳು ಇಲ್ಲಿನ ಶಾಸಕರು ವೈದ್ಯಕೀಯ ಶಿಕ್ಷಣ ಸಚಿವರು ಇತ್ತ ಗಮನಹರಿಸಿ ಗುಂಡಿ ಮುಚ್ಚುವ ಕಾರ್ಯಕ್ಕೆ ಆದೇಶವನ್ನು ಮಾಡುವ ಮೂಲಕ ಅಪಘಾತ ತಡೆಗಟ್ಟಬೇಕಿದೆ.