ಚಿಂಚೋಳಿ: ಮೀಸಲಾತಿ ಕಲ್ಪಿಸುವಲ್ಲಿ ಸವಿತಾ ಸಮಾಜಕ್ಕೆ ಅನ್ಯಾಯ

ಚಿಂಚೋಳಿ,ಫೆ.26- ಸವಿತಾ ಸಮಾಜದ ಮೇಲೆ ನಡೆದ ಅನೇಕ ಶೋಷಣೆಗಳನ್ನು ಎದುರಿಸಲು ಗಟ್ಟಿಯಾಗಿ ನಿಂತ್ತುಕೊಂಡ ಸಮಾಜ ಯಾವುದೇ ಕಾರಣಕ್ಕೂ ಮತಾಂತರ ಆಗಿಲ್ಲ, ಸಮಾಜಕ್ಕೆ ಸಮಾಜಿಕ ನ್ಯಾಯ ಮೀಸಲಾತಿಗೋಸ್ಕರ ಅನೇಕ ಹೋರಾಟ ಮನವಿಗಳು ಚುನಾಯಿತ ಜನಪ್ರತಿನಿಧಿಗಳಿಗೆ ಸಲ್ಲಿಸಿದರು ಇಲ್ಲಿಯವರೆಗೂ ನ್ಯಾಯ ದೊರಕಲಿಲ್ಲ ಇದರಿಂದ ಜನಪ್ರತಿನಿಧಿಗಳಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಕೊಂಚೂರ ಸವಿತಾ ಪೀಠ ಮಹಾಸಂಸ್ಥಾನದ ಪೂಜ್ಯರಾದ ಸವಿತಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಚಂದಾಪೂರದ ಸವಿತಾ ಸಮಾಜ ಭವನದಲ್ಲಿ ತಾಲ್ಲೂಕಿನ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿರವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಸಮುದಾಯಕ್ಕೆ ಮಧ್ಯಾಂತರ ವರದಿ ಪಡೆದುಕೊಂಡು ಮೀಸಲಾತಿ ಕಲ್ಪಿಸಿಕೊಂಟ್ಟಿದ್ದಾರೆ ಆದರೆ ಸವಿತಾ ಸಮಾಜಕ್ಕೆ ಮೀಸಲಾತಿಗಾಗಿ ಅನೇಕ ವರ್ಷಗಳಿಂದ ಪ್ರವರ್ಗ 1ಕ್ಕೆ ಬೇಡಿಕೆ ಇಟ್ಟಿದರು ಮೀಸಲಾತಿ ನೀಡುತ್ತಿಲ್ಲಾ ಸವಿತಾ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಆದರೆ ಬರುವ ದಿನಗಳಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಸರ್ಕಾರ ಇರಲಿ ಒಂದು ರಾಜ್ಯ ಸಭಾ ಸದಸ್ಯ ಸ್ಥಾನ ಹಾಗೂ ಎಂಎಲ್‍ಸಿ ಕೊಡಬೇಕು ಆಗ ನಮ್ಮ ಸಮಾಜ ಅವರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ.
ಪ್ಲಾಸ್ಟಿಕ್ ಸರ್ಜರಿ ಮಾಡುವುದು ತೋರಿಸಿಕೊಟ್ಟಿದ್ದು ಸವಿತಾ ಸಮಾಜ, ಕೇಂದ್ರ ಸರ್ಕಾರವು ಶುದ್ದ ಕುಡಿಯುವ ನೀರಿನ ಘಟಕಕ್ಕೆ ವರ್ಷಕ್ಕೆ 10ಸಾವಿರ ಕೋಟಿ ರೂ.ಹಣ ಖರ್ಚು ಮಾಡುತ್ತದೆ, ಆದರೆ ಶುದ್ದಿಕರಣ ಘಟಕದಿಂದ ಪೆÇೀಲಾಗುತ್ತಿರುವ ನೀರನ್ನು ಮರುಬಳಕೆ ಮಾಡಲು 2013ರಿಂದ ನಾವು ಸಂಶೋಧನೆ ಮಾಡುತ್ತಿದ್ದೇವೆ ಇದರಿಂದ ಕೇಂದ್ರಕ್ಕೆ 8ಸಾವಿರ ಕೋಟಿ ರೂ.ಆದಾಯವಾಗುತ್ತದೆ ಎಂದರು.
ಶಾಸಕ ಡಾ.ಅವಿನಾಶ ಜಾಧವ,ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್, ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪೂರ, ರಾಮಕೃಷ್ಣ ಪಿಡಿಓ,ಬೀದರ ಅರ್ಥಶಾಸ್ತ್ರ ಉಪನ್ಯಾಸಕ ಗಿರಿಧರ ಬಿ.ಎಚ್.ಮಾತನಾಡಿದರು.
ನೀತೀಶ ಕೋಳ್ಳೂರ ಸ್ವಾಗತಿಸಿದರು,ಜ್ಯೋತಿ ಧನವಾಡಕರ್ ನಿರೂಪಿಸಿದರು,ಸೂರ್ಯಕಾಂತ ವಕೀಲರು ವಂದಿಸಿದರು ಕಾರ್ಯಕ್ರಮದಲ್ಲಿ ಚಿಂಚೋಳಿಯ ಪುರಸಭೆ ಅಧ್ಯಕ್ಷ ಜಗದೇವಿ ಗಡಂತಿ, ಪುರಸಭೆ
ಉಪಾಧ್ಯಕ್ಷೆ ಸುಲೋಚನಾ ಕಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆನಂದ ಟೈಗರ್, ಬಿಜೆಪಿ ಪಕ್ಷದ ಮುಖಂಡರಾದ ರಾಮಚಂದ್ರ ಜಾಧವ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಡಿಎಸ್ಪಿ ಪಕ್ಷದ ಮುಖಂಡರಾದ ಗೌತಮ್ ಬೋಮ್ನಳ್ಳಿ, ಸವಿತಾ ಸಮಾಜ ಅಧ್ಯಕ್ಷ ಆನಂದ ಚೌದರಿ,ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ದುದಲ್, ಮಾರುತಿ ಗಂಜಗಿರಿ, ರಾಹುಲ್ ಯಾಕಾಪೂರ,ಮಲ್ಲಿಕಾರ್ಜುನ ಚಿಂಚೋಳಿಕರ್, ಶರಣಬಸಪ್ಪ ಸೂರ್ಯವಂಶಿ,ಉಮೇಶ ಗೊಂದೆಗಾಂವಕರ್,ಅಪ್ಪಣ್ಣ ಚಿನ್ನಕರ್, ರಾಮಶೇಟ್ಟಿ ಪವ್ಹಾರ, ತುಕ್ಕಾರಾಮ ಪವ್ಹಾರ,ಸುಭಾಷ್, ಪಾಂಡುರಂಗ, ನಾಗೇಶ ಚಿಂತಪಳ್ಳಿ,ಸಂಗಮೇಶ,ನಾಗೇಶ,ಜಗದೀಶ,ಜಗನ್,ಗಣಪತರಾವ,ಸುರಪ್ಪ,ರಾಜು,ಜಗದೀಶ್ವರ,ಅಂಬಣ್ಣ,ಪ್ರಮೋದಕುಮಾರ, ಮಲ್ಲಿಕಾರ್ಜುನ, ಅನೇಕ ಸವಿತಾ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.