ಚಿಂಚೋಳಿ: ಮಳೆ ಹಾನಿ ಸಮಿಕ್ಷೆಗೆ ಸೂಚನೆ

ಚಿಂಚೋಳಿ,ಜು.27- ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಹಾನಿಗಿಡಾದ ಮನೆಗಳ ಮತ್ತು ಬೆಳೆಗಳ ಹಾನಿಯ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ.
ಮಳೆಯಿಂದ ಭಾಗಶಃ ಮನೆ ಹಾನಿಯಾದ ಒಟ್ಟು 185 ಮನೆಗಳ ಬಗ್ಗೆ ವರದಿ ಪಡೆಯಲಾಗಿದ್ದು, ಸಂತ್ರಸ್ಥರ ಕುಟುಂಗಕ್ಕೆ 10 ಸಾವಿರ ರೂ.ಗಳ ಪರಿಹಾರವನ್ನು ಆರ್‍ಟಿಜಿಎಸ್ ಮೂಲಕ ಜಮಾ ಮಾಡಲಾಗಿದೆ ಎಂದು ತಹಸಿಲ್ದಾರ ಅಂಜುಮ ತಬಸ್ಸುಮ ಅವರು ತಿಳಿಸಿದ್ದಾರೆ.
ಬೆಳೆ ಹಾನಿ ಯಾದ ಬಗ್ಗೆ ಕೂಡ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ಹಾನಿಯಾದ ಬಗ್ಗೆ ವರದಿಯನ್ನು ರೈತ ಸಂಪರ್ಕ ಕೇಂದ್ರ ವಲಯವಾರು ಪ್ರತೇಕವಾಗಿ ವರದಿ ತಯ್ಯಾರಿಸಿ ಸಲ್ಲಿಸಲು ಈಗಾಗಲೇ ಸಭೆ ಮುಖಾಂತರ ತಿಳಿಸಲಾಗಿದೆ.
ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ಪ್ರಗತಿ ಯಲ್ಲಿ ಇದೆ ಎಂದು ತಹಸಿಲ್ದಾರ್ ಅಂಜುಮ್ ತಬಸ್ಸುಮ್, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.