ಚಿಂಚೋಳಿ: ಮನೆ ಕುಸಿದ ಸಂತ್ರಸ್ಥರಿಗೆ ಪರಿಹಾರ ವಿತರಣೆ

ಚಿಂಚೋಳಿ,ಜು.13- ತಾಲೂಕಿನಲ್ಲಿ ಸುರಿದ ಸತತ ಮಳೆಯಿಂದ ಕೆಲ ಗ್ರಾಮಗಳಲ್ಲಿ ಭಾಗಶಃ 49 ಮನೆ ಬಿದ್ದು ಹಾನಿಯಾಗಿರುತ್ತದೆ. ಹಾನಿ ಯಾದ ಮನೆಗಳಲ್ಲಿ 33 ಮನೆಗಳ ಸಂತ್ರಸ್ಥ ಫಲಾನುಭವಿಗಳಿಗೆ ಈಗಾಗಲೇ ಖಖಿಉS ಆರ್‍ಟಿಜಿಎಸ್ ಮೂಲಕ ಬ್ಯಾಂಕ್ ಗೆ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಎಂದು ತಹಸಿಲ್ದಾರ ಅಂಜುಮ ತಬಸ್ಸುಮ ಅವರು ತಿಳಿಸಿದ್ದಾರೆ.
ಹಿನ್ನುಳಿದ 16 ಮನೆಗಳ ಸಂಬಂಧಿಸಿದ ಮನೆ ಮಾಲೀಕರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಸದರಿ ಅವರೆಲ್ಲರಿಗೂ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಚಿಂಚೋಳಿ ತಹಸಿಲ್ದಾರ್ ಅಂಜುಮ್ ತಬಸ್ಸುಮ್, ಅವರು ಹೇಳಿದ್ದಾರೆ