ಚಿಂಚೋಳಿ: ಮನೆ ಕುಸಿತ ಸಂತ್ರಸ್ತರ ನೋವಿಗೆ ಸ್ಪಂದಿಸದ ಶಾಸಕರು

ಚಿಂಚೋಳಿ,ಜು.18- ತಾಲೂಕಿನ ತಾಜಲಾಪೂರ, ಯಾಲ್ಮಾಮಡಿ ನಂ 2 ಹಾಗೂ ಸುಮಾರು ಗ್ರಾಮಗಳು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಮನೆಗಳು ಕುಸಿದು ಬಿದ್ದಿವೆ, ಕೆಲವು ಕುಟುಂಬಗಳು ಮನೆ ಕಳೆದುಕೊಂಡು ವಾಸಸ್ಥಳವಿಲ್ಲದೆ ಕಂಗಾಲಾಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಮತಕ್ಷೇತ್ರದ ಶಾಸಕರು ಮತ್ತು ಜನಪ್ರತಿನಿಧಿಗಳು ಅವರÀ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ ಅವರು ಆರೂಪಿಸಿದ್ದಾರೆ.
ಅತಿವೃಷ್ಟಿ ಮಳೆಯಿಂದ ಚಿಂಚೋಳಿ ತಾಲೂಕಿನ ಜನತೆ ಕಷ್ಟದಲ್ಲಿರುವಾಗ ಶಾಸಕರು ಮತಕ್ಷೇತ್ರ ವೀಕ್ಷಣೆ ಮಾಡುವ ಬದಲು ಬೆಂಗಳೂರಿನಲ್ಲಿ ಮಜಾ ಮಾಡುತ್ತಾ ಕುಳಿತಿದ್ದಾರೆ, ಅಲ್ಲದೇ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಕೂಡ ಶಾಸಕರು ಚಿಂಚೋಳಿ ಕ್ಷೇತ್ರದಿಂದ ಮರಿಚಿಕೆ ಆಗಿದ್ದರು ಅದೇ ರೀತಿ ಕೂಡ ಈಗಲೂ ಕೂಡ ಶಾಸಕರು ಚಿಂಚೋಳಿ ಕ್ಷೇತ್ರದ ಜನರ ಕಷ್ಟ ಕೇಳದೆ ಸಂತ್ರಸ್ತರ ನೋವಿಗೆ ಸ್ಪಂಧಿಸುತ್ತಿಲ್ಲ.
ಚಿಂಚೋಳಿ ತಾಲೂಕಿನ ಜನರಿಗೆ ನಿರ್ಲಕ್ಷ್ಯ ಮಾಡುವುದು ಎದ್ದು ಕಾಣುತ್ತಿದೆ ಎಂದು ಜೆಡಿಎಸ್ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ ಅವರು ಆರೂಪಿಸಿದ್ದಾರೆ ಕೂಡಲೇ ಶಾಸಕರು ಮತ್ತು ಸಂಸದರು ಕ್ಷೇತ್ರದ ಜನತೆಯ ಮಧ್ಯೆ ಬಂದು ಕಷ್ಟಗಳನ್ನು ಅರಿತು ಸರಕಾರದಿಂದ ಬರುವ ಪರಿಹಾರ ಒದಗಿಸಿಕೊಡಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರು ಈ ಸಂಧರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೈಯ್ಯದ್ ನಿಯಾಜ್ ಅಲಿ, ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ,ಹಣಮಂತ ರೆಡ್ಡಿ ದೋಟಿಕೋಳ್, ಶಾಮಸುಂದರ್ ತಾಜಲಾಪೂರ, ಮಹೇಶ್,ಗುಂಡಪ್ಪ ಯಾಲ್ಮಾಮಡಿ, ವೀರಯ್ಯ ಸ್ವಾಮಿ, ಇದ್ದರು