ಚಿಂಚೋಳಿ: ಬೆಳೆಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ,ಆ.2- ಪಟ್ಟಣದ ತಹಸೀಲ್ ಕಛೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ತಹಸೀಲ್ದಾರರ ಮುಖಾಂತರ ವಿವಿಧ ಬೇಡಿಕೆಯ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರÀ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಅವರು, ತಾಲೂಕಿನಲ್ಲಿ ಧಾರಾಕಾರ ಸುರಿದ ಮಳೆಯ ಅತಿವೃಷ್ಟಿ ಹಾನಿಯಾದ ಬೆಳೆಗಳಿಗೆ ಅಣೆವಾರು ಪರಿಹಾರ ಘೋಷಿಸಬೇಕು ಮತ್ತು ಜುಲೈ ತಿಂಗಳಲ್ಲಿ ಧಾರಾಕಾರ ಮಳೆ ಸುರಿದು ಅತಿವೃಷ್ಟಿ ಮಳೆಯಿಂದ ರೈತರು ಬೆಳೆದಿರುವ ತೊಗರಿ, ಉದ್ದು, ಹೆಸರು, ಸೋಯಾಬಿನ್, ಎಳ್ಳು ಹಾನಿಯಾ ಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ ಎಂಬಂತೆ ಆಗಿದ್ದು ರೈತರು ಸಾಲದಲ್ಲಿ ಒದ್ದಾಡುತ್ತಿದ್ದಾರೆ ಸರ್ಕಾರ ತಕ್ಷಣ ಅತಿವೃಷ್ಟಿ ಬೆಳೆಹಾನಿಯನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಪರಿಹಾರ ನೀಡಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಾಧೀಶ ಜೆ.ಕೆ ಗೋಖಲೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕಾ ಅಧ್ಯಕ್ಷ ಜಾಫರ್ ಖಾನ್, ಮಲ್ಲಮ್ಮಾ ಮೋಘಾ, ಪ್ರದೀಪಕುಮಾರ, ಅನೇಕ ರೈತರು ಪ್ರತಿಭಟನೆಯಲ್ಲಿ ಇದ್ದರು