ಚಿಂಚೋಳಿ: ಬೀಜಕ್ಕಾಗಿ ಮುಗಿಬಿದ್ದ ರೈತರು

ಚಿಂಚೋಳಿ,ಜೂ.7- ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಕೊರೊನಾ ಸೋಂಕಿನ ಭಯವನ್ನು ತೊರೆದು ಬಿತ್ತನೆ ಬೀಜಕ್ಕಾಗಿ ರೈತರು ಮುಗಿಬಿಳುತ್ತಿರುವುದನ್ನು ತಪ್ಪಿಸಲು ಆಯಾ ಗ್ರಾಮಗಳಿಗೆ ಗ್ರಾಪಂ ಮೂಲಕ ಬೀಜ ಸರಬರಾಜು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಬಾಸಿದ ಅವರು ಮನವಿ ಮಾಡಿದ್ದಾರೆ.
ಕೋವಿಡ ನಿಯಮ ಪಾಲಿಸುವಂತೆ ಚಿಂಚೋಳಿ ಪೆÇಲೀಸ್ ಇಲಾಖೆ ಸಿಬ್ಬಂದಿಗಳು ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳು ರೈತರಿಗೆ ಕಡ್ಡಾಯ ಮಾಸ್ಕರ ಹಾಕಿಕೊಂಡು, ಕನಿಷ್ಟ 6 ಅಡಿ ಅಂತರ ನಿಂತುಕೊಂಡು ಪಾಳೆಯ ಪ್ರಕಾರ ಬೀಜಗಳನನ್ನು ಪಡೆಯುವಂತೆ ಮಾಡಿದ ಪ್ರಯತ್ನಕ್ಕೆ ಸ್ಪಂಧಿಸಲಿಲ್ಲ.
ಇಲ್ಲಿನ ರೈತರ ನುಕುನುಗ್ಗಲು ನೋಡಿದರೆ ಕೊರೊನಾ ಸೋಂಕು ಪುನಃ ಹರಡುವ ಭೀತಿ ಹೆಚ್ಚಾಗಿದೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ವಲಯದಲ್ಲಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜಗಳು ಅಲ್ಲಲೇ ವಿತರಣೆ ಮಾಡವ ಮೂಲಕ ಇಲ್ಲಿನ ರೈತರಿಗೆ ಕೊರೊನಾ ಸೋಂಕು ಹರಡದಂತೆ ಜಾಗ್ರತೆಯಿಂದ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಬಾಸಿದ ಅವರು ರೈತರಿಗೆ ಮನವಿ ಮಾಡಿದ್ದಾರೆ.