
ಚಿಂಚೋಳಿ,ಫೆ.21- ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೀದರ ಘಟಕದ ವಸತಿ ಸಾರಿಗೆ ಬಸ್ ಕಳ್ಳತನವಾಗಿರುವ ಪ್ರಕರಣ ಚಿಂಚೋಳಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ ಘಟಕದ ಸಾರಿಗೆ ಬಸ್ ಫೆ.20ರಂದು ಮನ್ನಾಎಖ್ಖೆಳಿ- ಚಿಂಚೋಳಿ ಮಾರ್ಗ ಸಂಚಾರವನ್ನು ಪೂರ್ಣಗೊಳಿಸಿ ಅಂದು ರಾತ್ರಿ 9-15ರ ಸುಮಾರಿನಲ್ಲಿ ಚಿಂಚೋಳಿ ಬಸ್ ನಿಲ್ದಾಣದ ಪ್ಲಾರ್ಟ ಫಾರ್ಮ 3ರಲ್ಲಿ ನಿಲ್ಲಿಸಲಾಗಿದ್ದ ಈ ಬಸ್ ಫೆ.21ರ ಬೆಳಗಿನ ಜಾವ 3.37ರ ಸುಮಾರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಸ್ ಚಾಲಾಯಿಸಿಕೊಂಡು ಹೋಗಿರುವ ದೃಷ್ಯ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುತ್ತದೆ.
ಬೀದರ ಘಟಕದ ಬಸ್ ಚಾಲಕ ಮೊಹ್ಮದ ಅಯೂಬ ಮತ್ತು ನಿರ್ವಾಹಕ ಈರಪ್ಪ ಅವರು, ಫೆ.20 ತಮ್ಮ ಬಸ್ ಮಾರ್ಗದ ಸಂಚಾರದ ಕೆಲವನ್ನು ಪೂರ್ಣಗೊಳಿಸಿ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಊಟ ಮೂಗಿಸಿಕೊಂಡು ವಿಶ್ರಾಂತಿ ಕೋಣೆಯಲ್ಲಿ ಮಲಗಿಕೊಂಡಿದ್ದರು. ಮರುದಿನ ಫೆ.21ರ ಬೆಳಿಗ್ಗೆ 5 ಗಂಟೆಯ ಸುಮಾರಿನಲ್ಲಿ ಎದ್ದು ನೋಡಿದಾಗ ತಾವು ನಿಲ್ಲಿಸಿರುವ ವಸತಿ ಬಸ್ (ಕೆಎ.38, ಎಫ್-971) ಕಾಣಿಸದೇ ಇರುವುದನ್ನು ಕಂಡು ಎಲ್ಲಕಡೆ ಹೋಡುಕಿದ್ದಾರೆ. ಚಿಂಚೋಲಿ ಬಸ್ ಡಿಪೋದಲ್ಲಿಯೂ ನೋಡಿದ್ದಾರೆ ಎಲ್ಲಿಯೂ ಕಂಡು ಬರದಿರುವುದಿಂದ ಬಸ್ ನಿಲ್ದಾದಲ್ಲಿರುವ ಸಿಸಿಟಿವಿ ಕ್ಯಾಮರವನ್ನು ಪರೀಕ್ಷಿಸಿದಾಗ ಕಳ್ಳನೊಬ್ಬ ಬೆಳಗಿನ ಜಾವ ಬಸ್ ಓಡಿಸಿಕೊಂಡು ಪರಾರಿಯಾಗಿರುವುದು ಕಂಡು ಬಂದಿದ್ದು, ಈ ಕುರಿತು ಬಸ್ ಚಾಲಕ ಮೊಹ್ಮದ ಅಯೂಬ ಅವರು ಚಿಂಚೋಳಿ ಪೊಲೀಸ ಠಾಣೆಯಲ್ಲಿ ದೂರು ಖಾಖಲಿಸಿದ್ದಾರೆ. ಬಸ್ ಕಳ್ಳನ ಪತ್ತೆಗಾಗಿ ಪೊಲೀಸರು ಜಾಲ ಬಿಸಿದ್ದಾರೆ.