ಚಿಂಚೋಳಿ ಪುರಸಭೆ: 7.50ಕೋಟಿ ಬಜೆಟ್ ಮಂಡನೆ

ಚಿಂಚೋಳಿ,ಮಾ.31- ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಜಗದೇವಿ ಗಡಂತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದೆ ಸಭೆಯಲ್ಲಿ ಪುರಸಭೆಯ 2021-22ನೇಯ ಸಾಲಿನ ಆಯವ್ಯಯ ಬಜೆಟ್ ಮಂಡನೆ ಮಾಡಲಾಯಿತು.
ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 10ರಷ್ಟು ಬಜೆಟ್ ವಿಸ್ತರಿಸ ಒಟ್ಟು 7.50 ಕೋಟಿ ರೂ.ಗಳ ಅಯವ್ಯಯ ಮಂಡನೆಗೆ ಒಪ್ಪಿಗೆ ನೀಡಲಾಯಿತು.
ಪಟ್ಟಣದ ರಸ್ತೆ, ಪಾದಚಾರಿ ರಸ್ತೆ ಕಾಮಗಾರಿ, ಸ್ಟ್ರೀಟ್ ಲೈಟ್, ಬೀದಿಗಳ ರಸ್ತೆ ಹಾಗೂ ಬೀದಿದೀಪಗಳು ಒಟ್ಟು 2.38 ಕೋಟಿ ರೂ.ಗಳನ್ನು ಮೀಸಲಿಡಲಾಯಿತು.
ಕುಡಿಯುವ ನೀರು ಸರಬರಾಜು ಇನ್ನೀತರ ವ್ಯವಸ್ಥೆಗೆ 45ಲಕ್ಷ, ಗಾರ್ಡನ್ ಇತರರ ಅಭಿವೃದ್ಧಿಗೆ 12.12ಲಕ್ಷ, ಕಲ್ಯಾಣ ನಿಧಿಗಾಗಿ 15ಲಕ್ಷ, ಕೇಂದ್ರ ಸರ್ಕಾರದ ಅನುದಾನ 86.85ಲಕ್ಷ, ರಾಜ್ಯ ಸರ್ಕಾರ 15ನೇ ಹಣಕಾಸು ಯೋಜನೆಯಡಿಯಲ್ಲಿ 1.29 ಕೋಟಿ,ಇನ್ನು ಅನೇಕ ಯೋಜನೆಗಳನ್ನು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಣವನ್ನು ಈ ಬಜೆಟ್‍ನಲ್ಲಿ ಮೀಸಲಿಡುವುದಾಗಿ ಎಂದು ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಹೇಳಿದರು.
ಪುರಸಭೆ ಸದಸ್ಯ ಅಬ್ದುಲ್ ಬಾಷೀದ್ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಬಡವರ ಯಾರಾದರು ಮನೆ ಸುಟ್ಟಿದ್ದು ಹಾನಿಯಾದರೆ ಯಾರಿಗಾದರು ತಕ್ಷಣ ಪುರಸಭೆಯಿಂದ ಪರಿಹಾರ ಕೊಡಲು ಹಣ ಮೀಸಲಿಡಬೇಕು ಹಾಗೂ ಸ್ಲಂ ಭೋರ್ಡ್ ನಲ್ಲಿ 1300 ಮನೆಗಳು ಇವೆ ಬಡವರಿಗೆ ವಿತರಣೆ ಮಾಡಬೇಕು ಪಟ್ಟಣದ ಆಶ್ರಯ ಮನೆಗಳಲ್ಲಿ 92 ಫಲಾನುಭವಿಗಳಿಗೆ ರದ್ದುಪಡಿಸಲಾಗಿದೆ ಅವರು ಕಂಗಾಲಾಗಿದ್ದಾರೆ ಅಂತವರಿಗೆ ಸ್ಲಂ ಬೋರ್ಡ್ ನಲ್ಲಿ ಮನೆಗಳು ವಿತರಣೆ ಮಾಡಬೇಕು ಆಶ್ರಯ ಮನೆಗಳಲ್ಲಿ ಬುನಾದಿ,ಡೋರ ಲೇವಲ್ ಕಟ್ಟಿದ್ದಾರೆ ಅಂಥವರ ಮನೆ ರದ್ದು ಆಗಿವೆ ಎಂದರು. ಆಶ್ರಯ ಫಲಾನುಭವಿಗಳ 92 ಜನರ ರದ್ದುಪಡಿಸಿದ ಪಟ್ಟಿಯನ್ನು ಎಲ್ಲಾ ಸದಸ್ಯರಿಗೆ ಕೊಡಿ ಎಂದು ಸದಸ್ಯ ಜಗನ್ನಾಥ ಗುತ್ತೇದಾರ ಹೇಳಿದರು.
ಎಸ್ಸಿಪಿ ಟಿಎಸ್ಪಿ ಅನುದಾನ ಶೌಚಾಲಯ ನಿರ್ಮಾಣಕ್ಕೆ ಏಕೆ ಬಳಕೆ ಮಾಡುಕೊಂಡ್ಡಿದ್ದಿರಿ ಶಿಕ್ಷಣಕ್ಕೆ ಏಕೆ ಅನುದಾನ ಬಳಕೆ ಮಾಡಿಕೊಂಡಿಲ್ಲಾ ಯಾರಿಗೂ ಕೇಳಿ ಅನುದಾನ ಶೌಚಾಲಯಕ್ಕೆ ಬಳಸಿದ್ದೀರಿ ಎಂದು ಪುರಸಭೆ ಜೆಇ ಮುಖ್ಯಾಧಿಕಾರಿಗಳಿಗೆ ಸದಸ್ಯ ಆನಂದ ಟೈಗರ್ ಸವಾಲು ಹಾಕಿದರು. ಈ ಸಂದರ್ಭದಲ್ಲಿ. ಪುರಸಭೆ ಸದಸ್ಯರು ಮತ್ತು ಪುರಸಭೆ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.