ಚಿಂಚೋಳಿ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ

ಚಿಂಚೋಳಿ,ಅ.2- ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನಿ, ಅವರು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅವರು ಮಾತನಾಡಿ ಪೌರ ಕಾರ್ಮಿಕರು ಮಳೆ ಬಿಸಲು ಚಳೆ ಅನ್ನದೇ ಚಿಂಚೋಳಿ ಪಟ್ಟಣದ ನಾಗರಿಕರಿಗೆ ಒಳ್ಳೆ ಸೇವೆಯನ್ನು ನೀಡುತ್ತಿದ್ದಾರೆ ಅದರಿಂದ ಚಿಂಚೋಳಿ ಪುರಸಭೆ ಎಲ್ಲಾ ಪೌರಕಾರ್ಮಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಕÁರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ವಿಶೇಷವಾಗಿ ಸ್ಪರ್ಧೆ ಏರ್ಪಡಿಸಿ ಬಹುಮಾನವನ್ನು ವಿತರಣೆ ಮಾಡಿ ಎಲ್ಲಾ ಪೌರ ಕಾರ್ಮಿಕರಿಗೆ ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆನಂದ್ ಟೈಗರ್, ಪುರಸಭೆ ಸದಸ್ಯರಾದ ಅಬ್ದುಲ್ ಬಸಿದ್, ಅನ್ವರ, ಶಫೀರ್, ಬಸವರಾಜ ಚಂದಾಪುರ, ನಾಗೇಂದ್ರಪ್ಪ ಗುರಂಪಳ್ಳಿ, ಬಸವರಾಜ ಸಿರಸಿ, ಪುರಸಭೆ ಸಿಬ್ಬಂದಿಗಳಾದ ದೇವಿಂದ್ರಪ್ಪ, ಗುಂಡಪ್ಪ, ಆನಂದ, ಮತ್ತು ಅನೇಕ ಪುರಸಭೆ ಸದಸ್ಯರು ಹಾಗೂ ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.