ಚಿಂಚೋಳಿ ಪುರಸಭೆ ಉಪಾಧ್ಯಕ್ಷರಾಗಿ ಜಿಲಾನಿ ಆಯ್ಕೆ: ಕಾರ್ಯಕರ್ತರ ವಿಜಯೋತ್ಸವ

ಚಿಂಚೋಳಿ,ನ.8- ಇಲ್ಲಿನ ಪುರಸಭೆಯ 09 ನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಿನ್ನೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಯ್ಯದ್ ಶಬೀರ್ ಜಿಲಾನಿ ಅವರು ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಮಾಪಣ್ಣ ಗಂಜಗಿರಿ ಅವರ ನೇತೃತ್ವದಲ್ಲಿ ಇಂದು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭೀಮರಾವ್ ಟಿ.ಟಿ, ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕ ಅಧ್ಯಕ್ಷರಾದ ಅನಿಲ್ ಕುಮಾರ ಜಮಾದಾರ. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೌತಮ ಪಾಟೀಲ. ಗೋಪಾಲರಾವ ಕಟ್ಟಿಮನಿ. ಬಸವರಾಜ ಮಲಿ. ದೀಪಕ ಪುನಶ ಶೆಟ್ಟಿ. ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರಾದ ಅಬ್ದುಲ್ ಬಾಸಿದ, ಜಗನ್ನಾಥ ಗುತ್ತೇದಾರ, ಜಗನ್ನಾಥ್ ಕಟ್ಟಿ. ಬಸವರಾಜ ಕಡಬೂರ, ಖಲೀಲ್ ಪಟೇಲ್, ಅನ್ವರ್ ಖತೀಬ್,ಸಂತೋಷ ಮಾಳಪನೂರ್ ಭಾಗವಹಿಸಿದ್ದರು.
ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರಾದ ನಾಗೇಂದ್ರಪ್ಪ ಗುರಂಪಲ್ಲಿ. ಬಿಎಸ್ಪಿ ಪಕ್ಷದ ಪುರಸಭೆ ಸದಸ್ಯರಾದ ಸುಶೀಲ್ ಕುಮಾರ. ಪುರಸಭೆ ಪಕ್ಷ ಪಕ್ಷೇತರ ಸದಸ್ಯರಾದ ಬಸವರಾಜ ಶಿರಸಿ. ಆನಂದ ಟೈಗರ. ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎಂ ಬಾರಿ, ಪ್ರವೀಣ ಟಿ ಟಿ. ಅಮರ ಲೋಡನೂರ. ಮಹೇಶ್ ಘಾಲಿ, ಮತೀನ್ ಸೌದಾಗರ್, ಶರಣು ಪಾಟೀಲ್ ಮೋತಕಪಳ್ಳಿ, ಶಿವನಾಗಯ್ಯ ಸ್ವಾಮಿ,ನಾಗೇಶ್ ಗುಣಾಜಿ,ಗಂಗಾಧರ್ ಗಡ್ಡಿಮನಿ. ಹಮೀದ್ ಹಫೀಜ್ ಸಾಬ್, ಚಾಂದ್ ಪಾಶ. ಹಾಗೂ ಅನೇಕ ಮುಖಂಡರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.