ಚಿಂಚೋಳಿ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚಿಂಚೋಳಿ: ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮತ್ತು ಕಾಂಗ್ರೆಸ್‍ನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಜಗದೇವಿ ಶಂಕರರಾವ ಗಡಂತಿ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಸೈಯದ ಶಬ್ಬೀರ ಅವರು ಅವಿರೋಧವಾಗಿ ಚುನಾಯಿತರಾಗಿದ್ದಾರೆ ಎಂದು ತಹಶಿಲ್ದಾರರು ಮತ್ತು ಚುನಾವಣೆ ಅಧಿಕಾರಿಗಳಾದ ಅರುಣ್ ಕುಮಾರ ಕುಲಕರ್ಣಿ ಅವರು ಪ್ರಕಟಿಸಿದರು.
ಚಿಂಚೋಳಿ ಶಾಸಕರಾದ ಡಾ ಅವಿನಾಶ ಜಾಧವ. ಪುರಸಭೆ ಅಧಿಕಾರಿಗಳಾದ ಅಭಯ ಕುಮಾರ.ಸುಲೇಪೇಟ ಸಿಪಿಐ ವಿಜಯ ಮಾಂತೇಶ್ ಮಠಪತಿ. ಚಿಂಚೋಳಿ ಪಿಎಸ್‍ಐ ರಾಜಶೇಖರ ರಾಠೋಡ. ಮಿರಿಯಾಣ ಪಿಎಸ್‍ಐ ಸಂತೋಷ್ ರಾಠೋಡ. ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಪಿ ಪಕ್ಷದ ಹಾಗೂ ಪಕ್ಷೇತರ ಸದಸ್ಯರು ಉಪಸ್ಥಿತರಿದ್ದರು.