ಚಿಂಚೋಳಿ: ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಕರೆ

ಚಿಂಚೋಳಿ,ಸೆ.19- ಜಿಲ್ಲಾ ಅಧಿಕಾರಿಗಳ ಆದೇಶದಂತೆ ಗಣಪತಿ ಪ್ರತಿಷ್ಠಾಪನೆ ಮತ್ತು ಈದ್ ಮಿಲಾದ್ ಹಬ್ಬಗಳು ಏಕಕಾಲದಲ್ಲಿ ಬಂದಿರುವುದರಿಂದ ಸಮಾಜಬಾಂಧವರು ಶಾಂತಿ ಮತ್ತು ಸೌರ್ಹದತೆಯಿಂದ ಹಬ್ಬಗಳನ್ನು ಆಚರಿಸಬೇಕು.
ಸಮಾಜಬಾಂಧವರಿಗೆ ಶಾಂತಿ ಸಭೆಯ ಮೂಲಕ ತಿಳಿಸಿರುವಂತೆ ಪಿಒಪಿ ಯಿಂದ ಸಿದ್ದಪಡಿಸಿರುವ ಮತ್ತು ರಾಸಾಯನಿಕ ಬಣ್ಣದಿಂದ ತಯಾರಿಸಿದ ಗಣಪತಿಗಳನ್ನು ನಿಷೇಧ ಮಾಡುವುದು ಬದಲಾಗಿ ನೈಸರ್ಗಿಕ ವಸ್ತುಗಳಿಂದ ಸಿದ್ದಪಡಿಸಿರುವ ಗಣಪತಿಗಳ ವಿಗ್ರಹಗಳನ್ನು ಕೂಡಿಸಬೇಕು ಎಂದು ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನಿ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ
ಮಣ್ಣಿನ ಪರಿಸರ ವಾಹಿನಿ ಗಣಪತಿಗಳು ಪ್ರತಿಷ್ಠಾಪಿಸಲು ಸಹಕರಿಸಬೇಕು, ಪುರಸಭೆ ವ್ಯಾಪ್ತಿಯ 23 ವಾಡ್ರ್ಗಳಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ಎಲ್ಲಾ ಯುವಕ ಮಂಡಳಿಯವರು ಸರ್ಕಾರದ ನಿಯಮವನ್ನು ಪಾಲನೆ ಮಾಡಬೇಕು ಮತ್ತು ಪ್ಲಾಸ್ಟಿಕ್ ಬಳಸೋದನ್ನು ನಿಷೇಧ ಮಾಡಬೇಕು ಗಣಪತಿಗಳು ವಿಸರ್ಜನೆ ಮಾಡಲು ಪ್ರತ್ಯೇಕವಾದ ಸ್ಥಳವನ್ನು ಬಸವೇಶ್ವರ ಪಕ್ಕದಲ್ಲಿರುವ ಬ್ರಿಜ್ ಹತ್ತಿರ ವ್ಯವಸ್ಥೆ ಮಾಡಲಾಗುವುದು ಆದ್ದರಿಂದ ಎಲ್ಲಾ ಗಣಪತಿ ವಿಗ್ರಹಗಳು ಒಂದೇ ಕಡೆಗೆ ಸಾಗಿಸಬೇಕೆಂದು ಪುರಸಭೆ ವತಿಯಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಕೋರಿದ್ದಾರೆ.
ಈ ನಿಯಮಗಳು ಪಾಲನೆ ಮಾಡದ ಇರುವದು ಕಂಡುಬಂದಲ್ಲಿ ಪುರಸಭೆ ಕಾಯ್ದೆ ಮತ್ತು ಪರಿಸರ ಮಾಲಿನ್ಯ ಕಾಯ್ದೆ ಪ್ರಕಾರವಾಗಿ ಕ್ರಮ ಜರುಗಿಸಲಾಗುವುದು ಎಂದು ಚಿಂಚೋಳಿ ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನಿ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.