ಚಿಂಚೋಳಿ: ನಾಪತ್ತೆಯಾದ ಶಾಸಕರು, ಕತ್ತಲಲ್ಲಿ ಓಡಾಡುವ ಸಂಸದರು

ಚಿಂಚೋಳಿ,ಜು.15- ತಾಲೂಕಿನದ್ಯಂತ ಕಳೆದ ಹಲವು ದಿನಗಳಿಂದ ಸುರಿದ ಧಾರಕಾರದ ಮಳೆಯಿಂದ ಗ್ರಾಮಸ್ಥರು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಇವರಿಗೆ ನೆರವಿಗೆ ಬಾರದ ಶಾಸಕರು, ಮತ್ತು ಸಂಸದರು ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಹಿಂದುಳಿದ ವಿಭಾಗ ಬ್ಲಾಕ್ ಕಾಂಗ್ರೇಸ್ ಸಮೀತಿ ಅಧ್ಯಕ್ಷರಾದ ಸುರೇಶ್ ಭಂಟ ಅವರು ಆರೋಪಿಸಿದ್ದಾರೆ.
ಮಳೆಯಿಂದ ಚಿಂಚೋಳಿ ಮತಕ್ಷೇತ್ರದಲ್ಲಿ ಅಪಾರ ಪ್ರಮಾಣದ ಹಾನಿ ಸಂಭಿವಿಸಿವೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾಕಷ್ಟು ಬಡ ಜನರ ಮನೆಗಳು ಬಿದ್ದುಹೋಗಿವೆ ಮತಕ್ಷೇತ್ರದ ತುಂಬ ಜನ ಮಳೆಯಿಂದ ಕಂಗಾಲಾಗಿದ್ದಾರೆ. ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಒಂದು ಕಡೆ ಬಿಟ್ಟುಬಿಡದೆ ಸುರಿಯುತ್ತಿವ ಮಳೆಯಾದರೆ ಮತ್ತೊಂದು ಕಡೆ ಬೆಳೆಗಳಿಗೆ ಬಸವನ ಹುಳುಗಳ ಕಾಟ ತಡೆಯೋಕ್ಕಾಗುತ್ತಿಲ್ಲ ಇಂತಹ ಸಮಯದಲ್ಲಿ ಕ್ಷೇತ್ರದ ಜನತೆಯ ಸಮಸ್ಸೆಗೆ ಸ್ಪಂಧಿಸಲು ಶಾಸಕರು ಮಾತ್ರ ಚಿಂಚೋಳಿ ಮತಕ್ಷೇತ್ರದ ಕಡೆ ತಲೆಹಾಕದೆ ಚಿಂಚೋಳಿ ಮತಕ್ಷೇತ್ರಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ನಾಪತ್ತೆಯಾಗಿದ್ದಾರೆ.
ಅತೀವೃಷ್ಟಿಯಿಂದಾಗಿ ಜನ ಕಷ್ಟದಲ್ಲಿ ಇರುವ ಸಮಯದಲ್ಲಿ ಶಾಸಕರು ಮುಂಜಾಗ್ರತ ಕ್ರಮವಾಗಿ ತಾಲೂಕ ಸಭೆ ಮಾಡಿಲ್ಲ, ಮತಕ್ಷೇತ್ರದ ವೀಕ್ಷಣೆ ಮಾಡಿಲ್ಲ ಸಂತ್ರಸ್ತರ ಗೋಳು ಕೇಳುವವರಿಲ್ಲ ಚಿಂಚೋಳಿ ಮತಕ್ಷೇತ್ರದ ಜನ, ರೈತರು ಕಷ್ಟದಲ್ಲಿ ಇದ್ದರು ಇಂತಹ ಸಮಯದಲ್ಲಿ ಶಾಸಕರು ಅದೆಂತಹ ಘನಂದಾರಿ ಕೆಲಸದಲ್ಲಿ ತಾಲ್ಲಿನರಾಗಿದ್ದಾರೋ ಆ ದೇವರೇ ಬಲ್ಲ. ಆದರೆ ಅವರ ಸ್ವಯಂ ಘೋಸಿತ ಹೊಗಳು ಭಟ್ಟ ಹಿಂಬಾಲಕರ ಕನಸಿನಲ್ಲಿ ಮಾತ್ರ ಶಾಸಕರು ಹಗಲು ರಾತ್ರಿ ಎನ್ನದೆ ಕ್ಷೇತ್ರದ ತುಂಬ ಸುತ್ತುತ್ತಿದ್ದಿದ್ದಾರೆ ಅದು ಹೇಗೋ ಆ ದೇವರೇ ಬಲ್ಲ.
ಸಂಸದರಾದ ಡಾ. ಉಮೇಶ್ ಜಾಧವ್ ಮಾತ್ರ ಮಧ್ಯರಾತ್ರಿ ಹಳ್ಳಿಗಳಲ್ಲಿಯ ತಮ್ಮ ಕಾರ್ಯಕರ್ತರ ಮನೆಗಳಿಗೆ ತೆರಳಿ ಚಹಾ ಕುಡಿದು ಮಳೆಯಲ್ಲಿ ಹಾನಿಗೋಳಗಾದ ಜನರ ಮನೆಗಳ ಸಂತ್ರರನ್ನು ಭೇಟಿ ಮಾಡುತ್ತಿಲ್ಲ.
ಒಂದು ಸಾರಿ ಬಿಜೆಪಿ ಮತ್ತೊಂದು ಸಾರಿ ಅಹಿಂದ ಅಂತ ಹೇಳಿಕೊಳ್ಳುವ ಶಾಸಕ, ಸಂಸದರ ಹಿಂಬಾಲಕರು ಮಾತ್ರ ಶಾಸಕರಿಗೆ ಖುಷಿ ಪಡಿಸುವದರಲ್ಲಿ ತಲ್ಲಿನರಾಗಿದ್ದಾರೆ. ತಾಲೂಕಿನಾದ್ಯಂತ 49 ಮನೆ ಬಿದ್ದಿವೆ 33 ಮನೆಗಳಿಗೆ ತುರ್ತು ಪರಿಸ್ಥಿತಿ ಅನುದಾನದಲ್ಲಿ ಪರಿಹಾರ ಧನ ಆರ್. ಟಿ. ಜಿ. ಎಸ್. ಮೂಲಕ ವಿತರಿಸಲಾಗಿದೆ ಎಂದು ತಹಸೀಲ್ದಾರರೇ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸತತವಾಗಿ ಹದಿನೈದು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದರು ಶಾಸಕರು ನಾಪತ್ತೆಯಾಗಿದ್ದರೆ. ಆದರೆ ಶಾಸಕ, ಸಂಸದರ ಅಹಿಂದ, ಬಿಜೆಪಿ ಹಿಂಬಾಲಕರಿಗೆ ಮಾತ್ರ ಶಾಸಕರು ಕ್ಷೇತ್ರದ ತುಂಬ ಸುತ್ತುತ್ತಿದ್ದಾರೆ ಎಂದು ಡೊಂಗುರ ಸಾರುತ್ತಿದ್ದಾರೆ.
ನಮ್ಮ ಶಾಸಕರು, ಸಂಸದರು ಅಹಂಕಾರ ಬಿಟ್ಟು ಕ್ಷೇತ್ರದಲ್ಲಿ ತಿರುಗುತ್ತಿದ್ದಾರೆ ಅಂತ ಹೇಳುವ ಹಿಂಬಾಲಕರೇ ಅಪ್ಪ ಮಗ ಶಾಸಕ, ಸಂಸದರಾಗಿದ್ದಾರೆ ಇಲ್ಲಿ ಅಹಂಕಾರದ ಪ್ರಶ್ನೆ ಬರುವದಿಲ್ಲ ಇದು ಅವರ ಕರ್ತವ್ಯ ನೆನಪಿರಲಿ. ಅಹಂಕಾರ ಮಾಡಿದವರನ್ನು ಚಿಂಚೋಳಿಯ ಜನತೆ ಎಲ್ಲಿಗೆ ಕಳುಹಿಸಬೇಕೋ ಗೊತ್ತಿದೆ.
ಚಿಂಚೋಳಿ ಮತಕ್ಷೇತ್ರದ ಜನತೆಯ ಹಣೆಬರವೋ ಏನೋ ಇಂತಹ ಬೇಜವಾಬ್ದಾರಿ ಶಾಸಕ, ಸಂಸದರನ್ನು ಪಡೆದಿದ್ದಕ್ಕೆ. ಅಪ್ಪ ಮಗ ಈಗಲಾದರೂ ಎಚೆತ್ತುಕೊಂಡು ಕೂಡಲೇ ಹಗಲ ಹೊತ್ತಿನಲ್ಲಿ ಕ್ಷೇತ್ರದ ಜನತೆಯ ಮಧ್ಯೆ ಬಂದು ವಾಸ್ತವಿಕತೆ ಅರಿತು ಸರಕಾರದಿಂದ ಜನತೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ಕ್ಷೇತ್ರದ ಜನತೆ ರೊಚ್ಚಿಗೆಳುವ ದಿನಗಳು ದೊರವಿಲ್ಲ. ಎಂದು ಅವರು ಹೇಳಿದ್ದಾರೆ.