ಚಿಂಚೋಳಿ ತಾಲೂಕಿನ ಹೂವಿನಭಾವಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಸಂಜೀವನ್ ಭೇಟಿ

ಚಿಂಚೋಳಿ,ಜು.18-ತಾಲೂಕಿನ ಹೂವಿನಭಾವಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪೂರ ಭೇಟಿ ನೀಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯನ್ನು ವೀಕ್ಷಿಸಿದರು. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಲೆಯ ತರಗತಿ ಕೋಣೆಯು ಬಿರುಕು ಬಿಟ್ಟಿ ನಿಂತಿವೆ, ಅದೇ ತರಗತಿ ಕೊಣೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯ ತರಗತಿ ಕೋಣೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಗ್ರಾಮಸ್ಥರು ಸಂಭಂದಪಟ್ಟ ಶಾಸಕರಿಗೆ ಸುಮಾರು ಬಾರಿ ಮನವಿ ಮಾಡಿದರು ಸ್ಪಂದಿಸದೆ ಬಡ ವಿದ್ಯಾರ್ಥಿಗಳ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂದು ಗ್ರಾಮಸ್ಥರು ಜೆಡಿಎಸ್ ಮುಖಂಡರಾದ ಸಂಜೀವನ್ ಯಾಕಾಪೂರ್ ರವರ ಗಮನಕ್ಕೆ ತಂದಿದ್ದರು. ಯಾಕಾಪೂರ ಅವರು ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಶಾಲೆಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ ಸೈಯ್ಯದ್ ನಿಯಾಜ್ ಅಲಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ ಸಂಜೀವನ್ ಯಾಕಾಪೂರ,ಬಸವರಾಜ್ ಪಾಟೀಲ್,ಪ್ರಕಾಶ್ ರೆಡ್ಡಿ ರಾಜಾಪೂರ, ರಘು ಹೊಸಮನಿ, ಬಸಿರೋದ್ದಿನ್, ಶಂಕ್ರಪ್ಪ ಮಾಸ್ಟರ್, ವೈಜನಾಥ್, ಮಹಿಮೂದ್, ರಂಜಿತ್, ಸಚಿನ್, ಸಂಜೂರೆಡ್ಡಿ, ಶಂಕರ್ ಗೌಡ, ಶ್ರೀಕಾಂತ್ ರೂಸ್ತ0ಪೂರ್, ಬಸವಂತ ರೆಡ್ಡಿ ಮಲ್ಲಿಕಾರ್ಜುನ್ ಪೂಜಾರಿ, ಇಮ್ರಾನ್ ಅಲಿ,ಮಾರುತಿ ತೆಗಲತಿಪ್ಪಿ ಸೇರಿದಂತೆ ಅನೇಕ ಹೂವಿನಭಾವಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.