ಚಿಂಚೋಳಿ: ಜೆಡಿಎಸ್ ಕಾರ್ಯಕರ್ತರ ಸಭೆ

ಚಿಂಚೋಳಿ ಮಾ 23: ಚಂದಾಪುರ ಪಟ್ಟಣದಲ್ಲಿ ತಾಲೂಕ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಚಿಂಚೋಳಿ ತಾಲೂಕಿನ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ಜರುಗಿತು.
ಸಭೆಯಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ತಾಲೂಕಿನ ಮುಖಂಡರು ಸೇರ್ಪಡೆಯಾದರು. ಕಾರ್ಯಕ್ರಮ ಉದ್ದೇಶಿಸಿ ಜಿಪಂ ಸದಸ್ಯ ಸಂಜೀವನ ಯಾಕಾಪುರ ಅವರು ಮಾತನಾಡಿ ನಾನು ಜೆಡಿಎಸ್ ಪಕ್ಷಕ್ಕೆ ಸೇರಿ ಒಂದು ತಿಂಗಳ ಮಾತ್ರ ವಾಯಿತು. ಅದರಲ್ಲಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಬಹಳ ಉತ್ಸಾಹದಿಂದ ಜೆಡಿಎಸ್ ಪಕ್ಷಕ್ಕೆ ಗ್ರಾಮದ ಮುಖಂಡರುಗಳು ಸೇರ್ಪಡೆಯಾಗುತ್ತಿದ್ದು ಮುಂಬರುವ ಜಿಪಂ ಮತ್ತು ತಾಲೂಕ ಪಂಚಾಯತ್ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವು ಧೂಳಿಪಟ ಆಗಲಿದ್ದು ನಮ್ಮ ಜೆಡಿಎಸ್ ಪಕ್ಷವು ಚಿಂಚೋಳಿ ತಾಲೂಕಿನಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ಚುಕ್ಕಾಣಿಯನ್ನು ಹಿಡಿಯುತ್ತದೆ. ಮಾರ್ಚ್ 17ರಂದು ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಕಾರ್ಯಕ್ರಮವು ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಲಾಯಿತು ಆದ್ದರಿಂದ ಚಿಂಚೋಳಿಯಲ್ಲಿ ಮುಂದಿನ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸಮಯವನ್ನು ತೆಗೆದುಕೊಂಡು ಕಾರ್ಯಕ್ರಮವನ್ನು ನಿಗದಿ ಮಾಡಬೇಕೆಂದು ಕಲಬುರಗಿ ಜಿಲ್ಲಾ ಜೆಡಿಎಸ್ ಮುಖಂಡರಿಗೆ ಕಾರ್ಯಕ್ರಮ ವೇದಿಕೆ ಮೇಲೆ ಸಂಜೀವನ ಯಕಪೂರ ಅವರು ಮನವಿ ಮಾಡಿಕೊಂಡರು.ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಒಮ್ಮೆ ಚಿಂಚೋಳಿಗೆ ಬಂದು ಹೋದರೆ ಚಿಂಚೋಳಿ ತಾಲೂಕಿನ ಚಿತ್ರವನ್ನು ಬದಲಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ ಎಂದು ಅವರು ಹೇಳಿದರು .ಕಾರ್ಯಕ್ರಮದಲ್ಲಿ. ಕಲಬುರ್ಗಿ ಜಿಲ್ಲಾ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಉಸ್ತುವಾರಿ ತಿಮ್ಮಯ್ಯ ಪುರ್ಲೆ. ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸುರನ. ಜಿಲ್ಲಾ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯ ಐಲಿನ ಜಾನ್ ಮಠಪತಿ. ಕಲಬುರ್ಗಿ ಜೆಡಿಎಸ್ ಪಕ್ಷದ ಯುವ ಜಿಲ್ಲಾಧ್ಯಕ್ಷ ಅಲಿ ಇನಾಮದಾರ. ಕಲ್ಬುರ್ಗಿ ಜೆಡಿಎಸ್ ಪಕ್ಷದ ಹಿಂದುಳಿದ ಘಟಕದ ಅಧ್ಯಕ್ಷ ಗುರುನಾಥ ಎಸ್ ಪೂಜಾರಿ. ಕಲಬುರ್ಗಿ ಜಿಲ್ಲಾ ಜೆಡಿಎಸ್ ಮುಖಂಡರಾದ ಶಂಕರ ಕಟ್ಟಿಸಂಗವಿ. ಸಂಗಮ ಪಾಟೀಲ. ಚಿಂಚೋಳಿಯ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷ ರವಿಶಂಕರ ರೆಡ್ಡಿ ಮುತ್ತಂಗಿ. ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ ಮೂಲಗಿ. ನಾಗೇಂದ್ರಪ್ಪಾ ಗುರಂಪಳ್ಳಿ. ಬಸವರಾಜ ಸಿರಸಿ. ಮಾಜಿದ ಪಟೇಲ. ಬಸವರಾಜ ವಾಡಿ. ಎಸ್. ಕೆ. ಮೊಕ್ತಾರ. ಶೇಖರ ಚಿಂಚೋಲಿಕರ. ಚಂದ್ರಕಾಂತ ಸಾಸರ್ಗಾವ. ಮಲ್ಲಣ್ಣ ಗೌಡ ಬೆಡಸೂರ. ಸಂಜು ಕಡಗದ. ಚನ್ನಬಸಪ್ಪ. ಹಣಮಂತ ಪೂಜಾರಿ. ಸಿದ್ದಯ್ಯಸ್ವಾಮಿ. ಆಯುಬ್. ಅಪ್ಪಣ್ಣ. ಸಂತೋಷ ಕುಮಾರ ಬೊಮ್ಮನಹಳ್ಳಿ. ಎಂ.ಕೆ. ಮಗದುಮ ಖಾನ್. ಮತ್ತು ಅನೇಕ ಜೆಡಿಎಸ್ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು