ಚಿಂಚೋಳಿ ಜಿಲ್ಲಾ ಕೇಂದ್ರ ಘೋಷಣೆಗೆ: ಗೌತಮ ಪಾಟೀಲ ಆಗ್ರಹ

ಚಿಂಚೋಳಿ,ಫೆ.23- ಚಿಂಚೋಳಿಯನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಯ ಕುರಿತು ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ್ ವೈಜನಾಥ ಪಾಟೀಲ ನೇತೃತ್ವದಲ್ಲಿ ಕರೆದ ಸಭೆಯಲ್ಲಿ ಒಮ್ಮತದಿಂದ ಜಿಲ್ಲಾ ಕೇಂದ್ರ ಘೋಷಣೆಯ ಬೇಡಿಕೆಗೆ ಸಮ್ಮತಿಯನ್ನು ಸೂಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌತಮ ಪಾಟೀಲರು, ಚಿಂಚೋಳಿ ಜಿಲ್ಲಾ ಕೇಂದ್ರವನ್ನಾಗಿ ಮಾಡಿದಲ್ಲಿ ಇದು ಹಾಗೂ ಸುತ್ತಲಿನ ತಾಲೂಕುಗಳು ಅಭಿವೃದ್ದಿಯಾಗಲಿವೆ.
ಜಿಲ್ಲಾ ಕೇಂದ್ರವಾದಲ್ಲಿ ಇಲ್ಲಿ ವೃತ್ತಿಪರ ಕಾಲೇಜು, ರೈಲ್ವೆ, ಕೃಷಿ, ವಾಣಿಜ್ಯ ವಹಿವಾಟು ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಸಿಗುತ್ತವೆ ಎಂದರು.
ಚಿಂಚೋಳಿ ಕೇಂದ್ರ ಸ್ಥಾನದಲ್ಲಿದ್ದು ಇದಕ್ಕೆ ಸೇಡಂ ಕಾಳಗಿ ಚಿಟ್ಗುಪ್ಪ ಚಾಂಗ್ಲೇರಿ ಮಾನ್ನಾಯೇಖೆಲ್ಲಿ ಇನ್ನಿತರ ಗ್ರಾಮ ಗಳಿಸಿರುವುದರಿಂದ ಇದು ಜಿಲ್ಲಾ ಕೇಂದ್ರವಾಗಲು ಯೋಗ್ಯವಾಗಿದೆ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಗಳಲ್ಲಿ ಈ ಕುರಿತು ಒಮ್ಮತದನಿರ್ಣಯ ಮಂಡಿಸಬೇಕು ಮತ್ತು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಮುಖಂಡರ ನ್ನೊಳಗೊಂಡ ಸಮಿತಿ ರಚನೆ ಮಾಡುವ ಮುಖಾಂತರ ಐಕ್ಯತೆಯಿಂದ ನಾವೆಲ್ಲರೂ ಚಿಂಚೋಳಿ ತಾಲ್ಲೂಕು ಜಿಲ್ಲಾ ಕೇಂದ್ರ ಹೋರಾಟ ಮಾಡಬೇಕೆಂದು ಅವರು ಹೇಳಿದರು.
ಸಭೆಯಲ್ಲಿ. ಪುರಸಭೆ ಉಪಾಧ್ಯಕ್ಷರಾದ ಸೈಯದ ಶಬ್ಬೀರ್. ಪುರಸಭೆ ಸದಸ್ಯರಾದ ಅಬ್ದುಲ್ ಬಾಸಿದ. ಜಗನ್ನಾಥ ಗುತ್ತೇದಾರ. ಅನ್ವರ್ ಖತೀಬ್. ಬಸವರಾಜ ಕಡಬೂರ್. ಕಲೀಲ್ ಪಟೇಲ್. ಚಿಂಚೋಲಿ ಪಟ್ಟಣದ ಮುಖಂಡರಾದ ರವಿಶಂಕರರೆಡ್ಡಿ ಮುತ್ತಂಗಿ. ನೀಲಕಂಠ ಸೀಳಿನ್. ಶಾಂತವೀರ ಹಿರಾಪುರ. ಅಯೂಬ ಖಾನ. ಕೆ.ಎಂ ಬಾರಿ. ಚಿತ್ರಶೇಖರ ಪಾಟೀಲ. ಭೀಮಶೆಟ್ಟಿ ಮುಕ್ಕ. ಸೂರ್ಯಕಾಂತ. ರಾಜು ಮುಸ್ತರಿ. ಹನುಮಂತ ಪೂಜಾರಿ. ಶ್ರೀಹರಿ ಕಾಟಾಪುರ. ಸಂತೋಷ್ ಗುತ್ತೇದಾರ. ಮತ್ತು ತಾಲ್ಲೂಕಿನ ವಿವಿಧ ಪಕ್ಷದ ಮುಖಂಡರು ಹಾಗೂ ತಾಲ್ಲೂಕಿನ ಎಲ್ಲ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು