ಚಿಂಚೋಳಿ ಗ್ರಾಪಂ ಚುನಾವಣೆ: 1277 ಜನ ಕಣದಲ್ಲಿ

ಚಿಂಚೋಳಿ,ಡಿ.20- ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಒಟ್ಟು 1661 ನಾಮಪತ್ರ ಸಲ್ಲಿಕೆಯಾಗಿದ್ದು, ಇವರಲ್ಲಿ 274 ಜನ ಅಭ್ಯರ್ಥಿಗಳು ತಮ್ಮ ನಾಮ ಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ ತಹಶಿಲ್ದಾರ ಅರುಣಕುಮಾರ ಕುಲಕರ್ಣಿ ಅವರು ತಿಳಿಸಿದ್ದಾರೆ.
ನಾಮಪತ್ರಗಳ ಪರಿಶೀಲನ ಪೂರ್ಣಗೊಂಡಿದ್ದು, ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಸ್ಪರ್ಧಿಸಿರುವ ಒಟ್ಟು 1277 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ತಾಲೂಕಿನಲ್ಲಿ ಕೆಲ ಗ್ರಾಮ ಪಂಚಾಯತಿಗಳಿಂದ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 163 ಕ್ಷೇತ್ರಗಳಿಂದ ಒಟ್ಟು 425 ಗ್ರಾಪಂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.