ಚಿಂಚೋಳಿ: ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಚಿಂಚೋಳಿ,ಜು.18- ಪಟ್ಟಣದ ಚಂದಾಪುರ ತಾಲೂಕ ಪಂಚಾಯತ್ ಕಚೇರಿ ಎದುರುಗಡೆ ರಾಷ್ಟ್ರೀಯ
ಮೂಲನಿವಾಸಿ ಮತ್ತು ಬಹುಜನ ಮಹಿಳಾ ಸಂಘ, ಬಹುಜನ ವಿಧ್ಯಾರ್ಥಿ ಫೆಡೇಶನ ಇಕ್ವಾಲಿಟಿ ಸಂಘಟನೆ, ಜಿಲ್ಲಾ ಸಮಿತಿ, ಜಂಟಿ ಸಂಘಟನೆಗಳ ಒಕ್ಕೂಟದ ನೆತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಯಿತು.
ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ ಸಂಘಟಕರು, ತಾಲ್ಲೂಕಾ ದಂಡಾಧಿಕಾರಿ ತಹಸೀಲ್ದಾರ್ ಹಾಗೂ ತಾಪಂ ಇಓ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ
ಮೂಲನಿವಾಸಿ ಸಂಘಟನೆಯ ಮುಖಂಡರಾದ ಮಾರುತಿ ಗಂಜಗರಿ ಅವರು, ತಾಲೂಕಿನ ಕಲ್ಲೂರು ಗ್ರಾಮದ ದಲಿತರ ಕಾಲೂನಿಯಲ್ಲಿರುವ ಮಹಿಳಾ ಶೌಚಾಲಯ ಕೆಡವಿ ನೆಲಸಮ ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಿ ಪುನಃ ಮಹಿಳಾ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕುಂಚಾವರಮ ವೆಂಕಟಾಪುರ ಪಸ್ತಪೂರ ಗಡಿಕೇಶ್ವಾರ ಚಿಮ್ಮನಚೋಡ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸಬೇಕು ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮ ಪಂಚಾಯತನಲ್ಲಿ 2021-2022 ಮತ್ತು 2022-2023 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಾದ ಅವ್ಯವಹಾರವನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
ಚಿಂಚೋಳಿ ತಾಲೂಕಿನ ಕಲ್ಲೂರು ಗ್ರಾಮದ ಸರ್ವೆ ನಂಬರ್ 151 ಗೈರಾಣಿ ಜಮೀನಿನಲ್ಲಿ ದಲಿತರಿಗೆ ರುದ್ರಭೂಮಿ ಮಂಜೂರು ಮಾಡಬೇಕು ಗಾರಂಪಳ್ಳಿ ಗ್ರಾಮದ ದಲಿತರ ಕಾಲೂನಿಯಲ್ಲಿ ಎರಡು ಹೈಮಾಸ್ಟ್ ದೀಪ ಅಳವಡಿಸಬೇಕು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕದ ಬಳಿ ಇರುವ ಸಿ ಸಿ ಕ್ಯಾಮರಾ ದುರಸ್ತಿ ಮಾಡಬೇಕು ತಾಡಪಳ್ಳಿ ಗ್ರಾಮದ ಜನರು ಪಸ್ತಾಪೂರ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಹೋಗಿ ರೇಷನ್ ತರಲು ಸಮಸ್ಯೆಯಾಗುತ್ತಿರುವುದರಿಂದ ತಾಡಪಳ್ಳಿ ಗ್ರಾಮದಲ್ಲಿ ರೇಷನ ವಿತರಣೆ ಮಾಡಲು ಸೂಚಿಸಬೇಕು ಐನಾಪೂರ ಗ್ರಾಮದಲ್ಲಿ ದಲಿತರ ರುದ್ರಭೂಮಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಕೂಡಲೆ ಸಿ.ಸಿ.ರಸ್ತೆ ನಿರ್ಮಿಸಬೇಕು.
ತಾಲೂಕಿನ ದೇಗಲ್ಮಡಿ ಗ್ರಾಮ ಪಂಚಾಯಿತಯ ದೇಗಲ್ಮಡಿ ಗ್ರಾಮದ 3 ನೇ ವಾರ್ಡದಿಂದ ಹೋಸಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಕೂಡಲೆ ಡಾಂಬರಿಕರಣ ರಸ್ತೆ ಮಾಡಬೇಕು ಚಿಂಚೋಳಿ ತಾಲೂಕಿನ ಕೊಳ್ಳೂರ ಐನೋಳ್ಳಿ ಮಿರಿಯಾಣ ಕುಪನೂರ ಐನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಳಪೆ ಕಾಮಗಾರಿಯನ್ನು ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ದೇಗಲ್ಮಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕುಡುಕರ ಹಾವಳಿ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಕೂಡಲೆ ಅಕ್ರಮ ಮದ್ಯ ಮಾರಾಟ ತಡೆಯಬೇಕು ಚಿಂಚೋಳಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ ಟ್ರಾಕ್ಟರ್ ಡ್ರೈವರ್ ಗಳು ರಾತ್ರಿ ಸಮಯದಲ್ಲಿ ಅಧಿಕ ಟೇಪರಿಕಾರ್ಡ ಸೌಂಡ್ ಬಿಟ್ಟು ಮರಳು ಸಾಗಾಣಿಕೆ ಮಾಡುವವರಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ಆಗುತ್ತಿದೆ ಆದ್ದರಿಂದ ಕೂಡಲೇ ಅಕ್ರಮ ಮರಳು ಮಾರಾಟ ತಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಮೂಲನಿವಾಸಿ ಬಹುಜನ ಮಹಿಳಾ ಸಂಘ ಹಾಗೂ ಬಹುಜನ ವಿದ್ಯಾರ್ಥಿ ಪೇಡ್ರೇಷನ ಆಫ್ ಈಕ್ವಾಲಿಟಿ ಜಂಟಿ ಸಂಘಟನೆಗಳ ಒಕ್ಕೂಟ ದ ವತಿಯಿಂದ ಹೋರಾಟ ಮಾಡಲಾಯಿತು ಈ ಸಂದರ್ಭದಲ್ಲಿ ಲಕ್ಷ್ಮಿ ಕಲ್ಲೂರ ಮಂಜುಳಾ ಶರಣಮ್ಮಾ ಶೀವಲೀಲಾ ಪುಷ್ಪಾವತಿ ಸುನೀತಾ ಗುಣವಂತಿ ಸಂಗೀತಾ ಕವಿತಾ ಚೆನ್ನಮ್ಮಾ ರತ್ನಮ್ಮಾ ನೀಲಮ್ಮಾ ಮಾರುತಿ ಗಂಜಗಿರಿ ಬಾಲಪ್ಪ ಮೇತ್ರಿ ಸಂದೀಪ ದೇಗಲ್ಮಡಿ ಗೋಪಾಲ ಗಾರಂಪಳ್ಳಿ ಮಾರುತಿ ಜಾದವ ಮೋಹನ ಐನಾಪೂರ ಸುಭಾಷ್ ವಿಜಯ ತಾಡಪಳ್ಳಿ ಸಾಗರ ಹೋಸಳ್ಳಿ ಮೌನೇಶ್ ಗಾರಂಪಳ್ಳಿ ಮಹೇಶ ದೇಗಲ್ಮಡಿ ರೇಣುಕಾ ಶ್ರೀಕೃಷ್ಣ ದೇಗಲ್ಮಡಿ ಗಮ್ಮು ರಾಠೋಡ್ ಸಂವಿಧಾನ ದೇಗಲ್ಮಡಿ ಸುಭಾಷ್ ಖಾನಾಪುರ ಪವನ್ ಕಾಶಿನಾಥ ಅಜಯ ಶಿವರಾಜ ದೇಗಲಮಡಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು