ಚಿಂಚೋಳಿ ಕ್ಷೇತ್ರದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗಡ್ಕರಿಯವರಿಂದ ಅಡಿಗಲ್ಲು

ಕಲಬುರಗಿ:ಫೆ.21: ಕೆಲವೆ ದಿನಗಳ ಹಿಂದಷ್ಟೇ 405.30 ಕೋಟಿ ರೂ.ಗಳ ಅನುದಾನದಡಿ ಮಂಜೂರಾತಿಗೊಂಡಿದ್ದ, ತೆಲಂಗಾಣ ಗಡಿಯಿಂದ ವಾಯಾ ಮಿರಿಯಾಣಾ, ಪೋಲಕಪಳ್ಳಿ, ಚಿಂಚೋಳಿಯವರೆಗಿನ 15.87 ಕಿ.ಮೀ. ಚತುಷ್ಫಥ ರಾಷ್ಟ್ರೀಯ ಹೆದ್ದಾರಿಯ ಅಡಿಗಲ್ಲು ಸಮಾರಂಭವನ್ನು ಗುರುವಾರ ಬೆಳಗಾವಿಯಲ್ಲಿ ಮಧ್ಯಾಹ್ನ 12.05 ಗಂಟೆಗೆ ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು £ೀರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಅವರು ತಿಳಿಸಿದ್ದಾರೆ.
ಬೆಳಗಾವಿ ವಲಯದಲ್ಲಿ ಬರುವ ಒಟ್ಟು 7,300 ಕೋಟಿ ರೂ.ಗಳ ಅನುದಾನದಲ್ಲಿ 400 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ಅಡಿಗಲ್ಲು ಸಮಾರಂಭವನ್ನು ನೆರವೆರಿಸಲಿದ್ದಾರೆ. ಚತುಷ್ಫಥ ರಸ್ತೆಯ ನಿರ್ಮಾಣದಿಂದ ಚಿಂಚೋಳಿ ತಾಲ್ಲೂಕಿಗೆ ಹೊಸ ಕಳೆ ಬರಲಿದೆ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳು ಅಭಿವೃದ್ದಿಗೊಳ್ಳಲಿವೆ ಹಾಗೂ ನಗರದ ಸೌಂದರ್ಯಿಕರಣವು ಹೆಚ್ಚಲಿದೆ, ಹೆದ್ದಾರಿಗೆ ಹೊಂದಿಕೊಂಡ ಎಲ್ಲ ಗ್ರಾಮಗಳಲ್ಲಿಯ ಜನರಿಗೂ ಮತ್ತು ಬೇರೆ ಭಾಗದ ಜನರಿಗೂ ಹೆದ್ದಾರಿಯಿಂದ ಹಲವಾರು ರೀತಿಯ ಸಹಾಯವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಕಳೆದ 2 ವಾರದ ಕೆಳಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಪತ್ರ ಬರೆದು ಹೆದ್ದಾರಿ ಮಂಜೂರು ಮಾಡಿರುವ ಬಗ್ಗೆ ತಿಳಿಸಿದಾಗ, ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಅವರಿಗೆ ಭೇಟಿ ಮಾಡಿ, ಧನ್ಯವಾದಗಳು ತಿಳಿಸಿ, ಆದಷ್ಟು ಬೇಗ ಸದರಿ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆ, ಅವರು ಸಹ ಬಹುತ್ ಜಲ್ದ ಹಿ ಕರ್ತಾ ಹೂ ಭಾಯಿ ಎಂದು ಭರವಸೆ ನೀಡಿದ್ದರು. ಅದರಂತೆ ಸಚಿವರು, ಹೆದ್ದಾರಿ ಮಂಜುರಾತಿ ಘೋಷಣೆ ಮಾಡಿದ ಕೇವಲ ಒಂದು ತಿಂಗಳೊಳಗೆ ನನ್ನ ಮನವಿಗೆ ಸ್ಪಂದಿಸಿ, ಅಡಿಗಲ್ಲು ಸಮಾರಂಭ ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರಿಗೆ ಮತ್ತು ಕಾರ್ಯಕ್ಕೆ ಸಹಕರಿಸಿದ ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವರವರಿಗೂ ಸಮಸ್ತ ಚಿಂಚೋಳಿ ಜನತೆಯ ಪರವಾಗಿ ಅಭಿನಂದಿಸಿರುವ ಅವರು, ಗುರುವಾರ ಚಿಂಚೋಳಿ ರಾಷ್ಟ್ರೀಯ ಹೆದ್ದಾರಿಯ ಅಡಿಗಲ್ಲು ಸಮಾರಂಭವು ಬೆಳಗಾವಿಯಿಂದ ಆನ್‍ಲೈನ್ ಮೂಲಕ ನಡೆಯಲಿದೆ, ಶೀಘ್ರವೇ ಕಾಮಗಾರಿಯೂ ಸಹ ಪ್ರಾರಂಭವಾಗವುದು, ಹೆದ್ದಾರಿಯಿಂದ ಚಿಂಚೋಳಿ ತಾಲ್ಲೂಕಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವುದು ಎಂದು ತಿಳಿಸಿದ್ದಾರೆ.