
ಚಿಂಚೋಳಿ: ವಿಧಾನಸಭಾ ಕ್ಷೇತ್ರದಲ್ಲಿ ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಪೈಪೆÇೀಟಿಯಿವೆ ಎಂದು ಬಿಗುತ್ತಿದ್ದು, ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಆರ್.ಯಾಕಾಪೂರ ಸಹ ಪಕ್ಷ ಸಂಘಟನೆ ಮಾಡಿ ತನ್ನದೆಯಾದ ಸೈನ್ಯ ಕಟ್ಟಿಕೊಂಡು ಪಕ್ಷ ಬಲಿಷ್ಠ ಗೊಳಿಸಿದ್ದಾರೆ. ಹೀಗಾಗಿ ಇಲ್ಲಿ ತ್ರಿಕೋನ ಸ್ವರ್ಧೆಯಾಗಲಿದ್ದು, ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ರಾಜಕೀಯ ದುರೀಣ ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ಹೇಳಿದರು.
ಪಟ್ಟಣದ ಚಂದಾಪೂರದ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿದ್ದೇನೆ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ಸುಭಾಷ್ ರಾಠೋಡ್ ಹಾಗೂ ಮುಂದಿನ ಭಾವಿ ಶಾಸಕರು ಎಂದು ಪೆÇೀಸ್ಟ್ ಹಾಕಲಾಗುತ್ತಿದೆ ಆದರೆ ಚಿಂಚೋಳಿ ಅಭಿವೃದ್ಧಿಗೆ ಸುಭಾಷ್ ರಾಠೋಡ್ ಆದರೆ ಹಿಂದಿನ ಮಾಜಿ ಶಾಸಕರು, ಸಚಿವರ ಅಭಿವೃದ್ಧಿ ಶೂನ್ಯ ಎಂದು ತಿಳಿದುಕೊಳ್ಳಬೇಕಾ ಎಂಬ ಪ್ರೇಶ್ನೆ ಕಾಡುತ್ತಿದೆ.
ಕಾಂಗ್ರೆಸ್ ನ ಸುಭಾಷ್ ರಾಠೋಡ್ ಆಳಂದ ತಾಲ್ಲೂಕಿನವರು ಚಿಂಚೋಳಿ ಅಭಿವೃದ್ಧಿ ಪಡಿಸುವವರು ಯಾತಕ್ಕಾಕಿ ಎಂಬ ಪ್ರೇಶ್ನೆ ? ಅವರು ಅಭಿವೃದ್ಧಿ ಪಡಿಸುವುದಾದರೆ ಆಳಂದ ಅಭಿವೃದ್ಧಿ ಪಡಿಸಲಿ, ಸುಭಾಷ್ ರಾಠೋಡ್ ಚಿಂಚೋಳಿಗೆ ಅನಿವಾರ್ಯವಲ್ಲ ಕೋಟಾದಲ್ಲಿ ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಸ್ಥಳೀಯ ಮುಖಂಡರಿಗೆ ಕಡೆಗಣಿಸಿ ಬೇರೆ ತಾಲ್ಲೂಕಿನ ಮುಖಂಡನಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು ಅಕ್ಷರಶಃ ತಪ್ಪು,ಹಿಂದೆ ಸುನೀಲ್ ವಲ್ಯಾಪೂರೆ ಒಮ್ಮೆ ಗೆಲುವು ಸಾಧಿಸಿ ಎರಡು ಬಾರಿ ಸೋಲುಂಡು ಕಾರ್ಯಕರ್ತರಿಗೆ ತಬ್ಬಲಿ ಮಾಡಿ ಪಲಾಯನ ಮಾಡಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡರವರು ಉತ್ತಮ ಶಿಕ್ಷಣವುಳ್ಳ, ಜ್ಞಾನವುಳ್ಳ, ಮಾತಿನ ಚಾತುರ್ಯವುಳ್ಳ, ಉತ್ತಮ ವಾಗ್ಮಿ, ಅದಕಾರಣ ಅವರ ಸೇವೆ ವಿಧ್ಯಾರ್ಥಿಗಳಿಗೆ ಅನುಕೂಲವಾಗಲು ಶಿಕ್ಷಕ ವೃತ್ತಿ ಸಾಧಿಸಬೇಕು.
ಬಿಜೆಪಿ ಪಕ್ಷವು ಜಾತಿ ಜಾತಿಗಳ ಮದ್ಯೆ ಗೊಂದಲ ಸೃಷ್ಟಿ ಮಾಡಿ ರಾಜಕೀಯ ಮಾಡುತ್ತಿರುವುದು ಒಳ್ಳೆಯದಲ್ಲ,ಬಿಜೆಪಿ ಪಕ್ಷವು ಅಲ್ಪಸಂಖ್ಯಾತರ ಮೀಸಲಾತಿಯೇ ರದ್ದುಪಡಿಸಿದ್ದು ಖಂಡನೀಯ,ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಬಿಜೆಪಿ ಸರ್ಕಾರದಲ್ಲಿ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದು ಹಾಗೂ ಶೇಕಡಾ 40ರಷ್ಟು ಭ್ರಷ್ಟಾಚಾರ ಆರೋಪ ಕೂಡ ಕೇಳಿಬರುತ್ತಿದೆ ಕಳೆದ ನಾಲ್ಕು ವರ್ಷಗಳಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯ ಮಾಡಿಲ್ಲ.
ಜೆಡಿಎಸ್: ಪಕ್ಷದ ಅಭ್ಯರ್ಥಿ ಸಂಜೀವನ್ ಆರ್.ಯಾಕಾಪೂರರವರು ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಪಕ್ಷದ ಸಂಘಟನೆ ಮಾಡಿ ಅನೇಕ ಕಾರ್ಯಕರ್ತರಿಗೆ ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡಿ ತನ್ನದೆಯಾದ ಪಕ್ಷದ ಸೈನ್ಯ ಕಟ್ಟಿಕೊಂಡು ಕ್ಷೇತ್ರದ್ಯಂತ ಸುತ್ತಿ ಹಲವಾರು ಜನರ ಸಮಸ್ಯೆ ಬಗೆಹರಿಸಿ ಕೋವೀಡ್ ಸಂದರ್ಭದಲ್ಲಿ ಅನೇಕ ಬಡ ಕುಟುಂಬಗಳಿಗೆ ನೇರವಿಗೆ ಧಾವಿಸಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಕೂಡ ಬಲಿಷ್ಠ ಬೇರು ಊರಿದೆ.
ಕ್ಷೇತ್ರದಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೆಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂರವರು ಆಗಮಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ ಕಾರಣ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು