ಚಿಂಚೋಳಿ: ಕೊಡಗಳೊಂದಿಗೆ ಪ್ರತಿಭಟನೆ

ಚಿಂಚೋಳಿ,ಮೇ.25- ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪೂರದ ಆಶ್ರಯ ಕಾಲೂನಿಯಲ್ಲಿ ಹಾಗೂ ವಿವಿಧ ವಾರ್ಡಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಮತ್ತು ವಿವಿದ ಯೋಜನೆಗಳಡಿಯಲ್ಲಿ ಫಲಾನುಭವಿಗಳು ಕಟ್ಟಿಸಿಕೊಳ್ಳುತ್ತಿರುವ ಮನೆ ಬಿಲ್ಲುಗಳನ್ನು ಕೂಡಲೆ ಬಿಡುಗಡೆ ಮಾಡಬೇಕು, ತಾಂಡೂರ- ಚಿಂಚೋಳಿ ಮುಖ್ಯರಸ್ತೆಯಿಂದ ಆಶ್ರಯ ಕಾಲೂನಿಗೆ ಕೂಡು ರಸ್ತೆ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಲಾಯಿತು.
ಪುರಸಭೆ ಕಾರ್ಯಾಲಯದ ಎದುರುಗಡೆ ಪ್ರತಿಭಟನೆ ಕೈಗೊಂಡು ಚಿಂಚೋಳಿ ಗ್ರೇಡ್- 2 ತಹಸಿಲ್ದಾರರಾದ ವೆಂಕಟೇಶ ದುಗ್ಗನ, ಮುಖಾಂತರ ತಹಸಿಲ್ದಾರ್ ಜಿಲ್ಲಾಧಿಕಾರಿಗಳು ಕಲಬುರಗಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾರುತಿ ಗಂಜಗಿರಿ ಸಿದ್ದು ರಂಗನೂರ ಪುಟ್ಟರಾಜ ಬೀರನಳ್ಳಿ ವೀರಣ್ಣಾ ಮೂಲಿಮನಿ ಜೀವನ ಚಿಂಚೋಳಿ ಶಾರುಕ್ ಬಳಗಾರ ಈಶ್ವರ ತಾಡಪಳ್ಳಿ ಮೌನೇಶ ಗಾರಂಪಳ್ಳಿ ಹರ್ಷವರ್ಧನ ಚಿಮ್ಮನಕಟ್ಟಿ ಉಲ್ಲಾಸ ಕೆರೊಳ್ಳಿ ನೀಲಮ್ಮಾ ರೇಣುಕಾ ಭೀಮಬಾಯಿ ಈಶ್ವರಿ ಬಕ್ಕಮ್ಮಾ ಈರಮ್ಮಾ ಮರಪಳ್ಳಿ ಸುನೀತಾ ಕೊಳ್ಳೂರ ಕಮಲಮ್ಮಾ ಬೋವಿ ವಿಜಯಲಕ್ಷ್ಮಿ ನೀಲಮ್ಮ ಬೋವಿ ಈಶ್ವರಿ ತರಕಾರಿ ಲಕ್ಷ್ಮಿ ಸಜ್ಜನ ಶರಣಮ್ಮಾ ದಸ್ತಮ್ಮಾ ಸುಜಾತಾ ಜಗಮ್ಮಾ ಇಂದುಮತಿ ಶರಣಮ್ಮಾ ಶಾರಮ್ಮಾ ಆಶಾ ಗಂಗಮ್ಮಾ ಧನ್ಯಮ್ಮಾ ಜಯಮ್ಮಾ , ಮತ್ತು ಅನೇಕ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.