ಚಿಂಚೋಳಿ: ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಚಿಂಚೋಳಿ,ಜು.20- ಪಟ್ಟಣದ ಚಂದಾಪುರದ ಕೃಷಿ ಇಲಾಖೆ ಕಾರ್ಯದ ಎದುರು ಪ್ರತಿಭಟನೆ ಕೈಗೊಂಡ ಕರ್ನಾಟಕ ಪ್ರಾಂತ ರೈತ ಸಂಘ ವಿವಿಧ ಬೇಡಿಕೆಗೆ ಒತ್ತಾಯಿಸಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮುಖಾಂತರ ಕಲಬುರ್ಗಿ ಜಂಟಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಫ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
ಶರಣಬಸಪ್ಪ ಮಮಶೇಟ್ಟಿ, ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ಬೆಳೆ ನಷ್ಟ ಪರಿಹಾರ ಹಿಂದುಳಿದ
ನೀಡಬೇಕು ಮತ್ತು ತಾಲೂಕಿನಲ್ಲಿ ರೈತರಿಗೆ ಕಳಪೆ ಮಟ್ಟದ ಸೋಯಾ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿದ ಕಂಪನಿ ಮೇಲೆ
ಕಾನೂನಿನ ಪ್ರಕಾರ ಕ್ರಮ ಜರುಗಿಸಿ ಬೀಜದ ಕಂಪನಿಯಿಂದ ರೈತರಿಗೆ ಪರಿಹಾರ ವಿತರಿಸಬೇಕು ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ ಈ ವರ್ಷ
ಮುಂಗಾರು ಬಿತ್ತನೆ ಮಳೆ ಬಂದು ರೈತರಿಗೆ ಖುಷಿ ತಂದು ಕೊಟ್ಟಿದೆ ಆದರೆ ಮುಂಗಾರು ಬಿತ್ತನೆ ಸಮಯದಲ್ಲಿ ಬೀಜ ವಿತರಿಸುವ ರೈತ ಸಂಪರ್ಕ
ಕೇಂದ್ರಗಳಲ್ಲಿ ಕೆಲವು ಬೀಜ ಉತ್ಪಾದಿಸುವ ಕಂಪನಿಗಳು ಕಳಪೆ ಮಟ್ಟದ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿದ್ದಾರೆ ಬೀಜದ ಕಂಪನಿಗಳು ವರುಣ್ ಹೈಬ್ರಿಡ್ ಸೀಡ್ಸ್ ಕಂಪನಿ, ಮಹಾಕಾಳೇಶ್ವರ ಕಂಪನಿ, ಸಿದ್ದಾರ್ಥ್ ಕಂಪನಿ, ಕೆಎಸ್‍ಎಸ್ಸಿ ಕಂಪನಿಗಳಲ್ಲಿ ಕೃಷಿ ಅಧಿಕಾರಿಗಳು ತಕ್ಷಣವೇ ಸೋಯಾ ಬೀಜದ ಕುರಿತು ಸರಿಯಾದ ತನಿಖೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ರೈತರ ಜಮೀನಿನಲ್ಲಿ ಬೀಜ ಬಿತ್ತನೆ ಮಾಡುವಾಗ
ರಸಗೊಬ್ಬರ ಖರೀದಿ ಬೀಜ ಖರೀದಿ, ಬುಕ್ಕದ ಆಳು, ಕೂಲಿ, ಖರ್ಚಿನ ವೆಚ್ಚು ಮಾಡಿದ ಕಳಪೆ ಮಟ್ಟದ ಬೀಜದಿಂದ ರೈತರಿಗೆ ಅನ್ಯಾಯ ಚ ಸೋಯಾ ಬೀಜದಿಂದ ಮಾಡಿದಂತಾಗಿದೆ ಕಂಪನಿಯವರು ಮಮಟ್ಟ ತಪ್ಪಿನಿಂದ ರೈತರು ಮೋಸ ಹೋಗಿದ್ದು ಹೀಗಾಗಿ ಕೃಷಿ ಅಧಿಕಾರಿಗಳು ಸೂಕ್ತವಾದ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಿ, ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಿಂದ ಹಾನಿಯಾದ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು ಹೀಗಾಗಿ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ವರದಿ ತರಿಸಿಕೊಂಡು ಹಾನಿಗೊಳಗಾದ ರೈತರ ನೆರವಿಗೆ ಸರ್ಕಾರ ಧಾವಿಸಿ ರೈತರಿಗೆ ಕನಿಷ್ಟ 25 ಸಾವಿರ ರೂಪಾಯಿ ಪ್ರತಿ ಎಕರೆಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೇವಿಂದ್ರಪ್ಪಾ ಪಾಟೀಲ, ಸಿದ್ದಾರ್ಥ ಠಾಕೂರ್, ಜಾಫರ್ ಖಾನ್, ಪರಮೇಶ್ವರ ಕಾಂತಾ, ಪ್ರದೀಪ ತಿರಲಾಪೂರ, ದಸರಥ
ಇದಲಾಯಿ, ಕಾಶಪ್ಪ ಹೊದೊಡ್ಡಿ, ಗೌರಿಶಂಕರ ಕಿಣ್ಣಿ, ಮತ್ತು ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.