ಚಿಂಚೋಳಿ: ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಚಿಂಚೋಳಿ,ಜು.12- ಪಟ್ಟಣದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ್ ಮಲಿ, ಅವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ಕೈಗೊಳ್ಳಲಾಯಿತು.
ಕೇಂದ್ರದ ಬಿಜೆಪಿ ಸರಕಾರ ರಾಹುಲ್ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿರುವುದನ್ನು ಬಲವಾಗಿ ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮೌನ ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಅವುಂಟಿ, ಜಗನ್ನಾಥ ಕಟ್ಟಿ, ಅಜಿತ್ ಪಾಟೀಲ್, ಲಕ್ಷ್ಮಿ ಮಂಜುನಾಥ್ ಕೊರವಿ, ರಾಮಶೆಟ್ಟಿ ಪವಾರ, ಗೋವಿಂದ ರಾಠೋಡ್,ನಾಗೇಶ್ ಗುಣಾಜಿ, ಬಸವರಾಜ್ ವಾಡಿ ಮತೀನ್ ಸೌದಾಗರ್, ಶೇಕ್ ಫರೀದ್, ಸುಭಾಷ್ ಗುತ್ತೇದಾರ, ಓಮನರಾವ್ ಕೊರವಿ, ಮಲ್ಲಪ್ಪ ಕೋಟಪಲ್ಲಿ, ಸುಧೀರ್ ಗೊಂಡ, ರಮೇಶ್ ವಾರ್ಕರ್, ಗೋಪಾಲ ಗಾರಮಪಳ್ಳಿ, ವಿಜಯ್ ಕುಮಾರ್ ಬಿರಾದರ್, ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು .