ಚಿಂಚೋಳಿ: ಕತ್ತಲೆಯಲ್ಲಿ ತಾಲೂಕ ಆಡಳಿತ ಸೌಧ

ಚಿಂಚೋಳಿ,ಸೆ.1- ಪಟ್ಟಣದ ಚಂದಾಪುರದ ಸರ್ಕಾರಿ ಹೊಲದಲ್ಲಿ ನೂತನವಾಗಿ ನಿರ್ಮಿಸಿದ ತಾಲೂಕ ಆಡಳಿತ ಸೌಧದ ಕಟ್ಟಡವು ಉದ್ಘಾಟನೆ ಆದರೂ ಕೂಡ ಇನ್ನವರೆಗೂ ನೂತನ ಆಡಳಿತ ಸೌಧ ಕಟ್ಟಡವು ಬೀಗ ಹಾಕಿದ್ದು ರಾತ್ರಿ ಹೊತ್ತಿನಲ್ಲಿ ತಾಲೂಕ ಆಡಳಿತ ಸೌದಾದಲ್ಲಿ ನೈಟ್ ಗಳಿಲ್ಲದೆ ಕತ್ತಲೆಯಲ್ಲಿದೆ.
ದೇವರು ಕೊಟ್ಟರು ಪೂಜಾರಿ ಕೊಡದಂತೆ ನೂತನ ತಾಲೂಕ ಆಡಳಿತ ಸೌಧ ಕಥೆಯಾಗಿದೆ ಜನಸಾಮಾನ್ಯರು ಇಲ್ಲಿನ ತಾಲೂಕ ಆಡಳಿತ ಸೌಧಕ್ಕೆ ಹೋಗಬೇಕಾದರೆ ರಸ್ತೆಯೇ ಇಲ್ಲ. ಇಷ್ಟೆಲ್ಲ ನೋಡಿದರೆ ತಾಲೂಕ ಆಡಳಿತವು ಸಂಪೂರ್ಣ ಅಭಿವೃದ್ಧಿಯಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ.
ತಾಲೂಕ ಆಡಳಿತ ಸೌಧ ಅಭಿವೃದ್ಧಿ ಎಲ್ಲಿ ್ಲಕುಂಟಿತ ಗೊಂಡಿದ್ದೆ ಅದೇ ರೀತಿ ತಾಲೂಕಿನಲ್ಲಿ ಕೂಡ ವಿವಿಧ ಕಾಮಗಾರಿಗಳು ಯಾವ ಸ್ಥಿತಿಯಲ್ಲಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ತಾಲೂಕಿನ ಜನರು ಯೋಚನೆ ಮಾಡುವಂತಾಗಿದೆ/
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚಿಂಚೋಳಿಯ ತಾಲೂಕ ಆಡಳಿತ ಸೌಧ ಆರಂಭಿಸಿ ಚಿಂಚೋಳಿ ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಚಿಂಚೋಳಿಯ ಜೆಡಿಎಸ್ ಪಕ್ಷದ ಯುವ ಮುಖಂಡರಾದ ರಾಹುಲ ಯಾಕಾಪೂರ್, ಅವರು ಆಗ್ರಹಿಸಿದ್ದಾರೆ.