ಚಿಂಚೋಳಿ: ಆನೆಕಾಲು ರೋಗ ಮುಕ್ತ ಅಭಿಯಾನಕ್ಕೆ ಚಾಲನೆ

ಚಿಂಚೋಳಿ,ಜ.19- ಪಟ್ಟಣದ ಚಂದಾಪುರದ ಕರ್ನಾಟಕ ಪಬ್ಲಿಕ್ ಹೈ ಸ್ಕೂಲ್ ನಲ್ಲಿ ತಾಲೂಕ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಆನೆಕಾಲು ಮುಕ್ತ ಸಮಾಜಕ್ಕಾಗಿ ಸಾಮೂಹಿಕ ಔಷಧಿ ಸೇವನೆಯ- 2024ರ ಕಾರ್ಯಕ್ರಮಕ್ಕೆ ತÁಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಮೊಹಮ್ಮದ್ ಗಫಾರ್ ಅವರು ಆನೆಕಾಲು ಮಾತ್ರೆ ನುಂಗುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ತಹಸಿಲ್ದಾರರಾದ ಸುಬ್ಬಣ್ಣ ಜಮಖಂಡಿ ಅವರು ಮಾತನಾಡಿ, ಶಾಲೆಯ ಮಕ್ಕಳು ಹಾಗೂ ಮಕ್ಕಳ ಪಾಲಕರು ಮತ್ತು ಅಣ್ಣ-ತಮ್ಮಂದಿರಿಗೂ ಕೂಡ ಆನೆಕಲ್ಲು ರೋಗ ಮುಕ್ತಿ ಆಗಬೇಕೆಂದರೆ.
ಆನೇಕಲ್ ರೋಗವು ನಿಂತ ನೀರಿನಿಂದ ಸೊಳ್ಳೆಗಳ ಉತ್ಪಾದನೆ ಆಗುತ್ತದೆ ಸೊಳ್ಳೆಗಳು ಆನೆ ಕಾಲು ಇದ್ದ ರೋಗಿಗೆ ಕಚ್ಚಿದರೆ ಅದೇ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದ್ದಾರೆ ಆನೇಕಲ್ ರೋಗ ಆಗುವ ಸಂಭವನೀಯತೆ ಹೆಚ್ಚು, ಅದರಿಂದ ಎಲ್ಲಾ ಮಕ್ಕಳು ಮತ್ತು ತಾಲೂಕಿನ ಎಲ್ಲಾ ನಾಗರಿಕರು ಆನೆಕಾಲು ಮುಕ್ತ ವಾಗಬೇಕಾದರೆ ಎಲ್ಲರೂ ಮಾತ್ರೆ ತಗೋಬೇಕು ಆನೆಕಾಲು ರೋಗ ಮಾತ್ರೆಗಳು ಎಲ್ಲ ಮಕ್ಕಳು ಯಾವುದೇ ಭಯವಿಲ್ಲದೆ ಮಾತ್ರೆಯನ್ನು ಹಾಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ್, ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಮಹಮ್ಮದ್ ಗಫರ್, ಚಂದಾಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಸಂತೋಷ್ ಪಾಟೀಲ್, ಬಿಆರಸಿ
ನಾದಶೆಟ್ಟಿ ಭದ್ರಶೆಟ್ಟಿ, ಕಂದಾಯ ನಿರೀಕ್ಷಕರದ ರವಿ ಚಿಟ್ಟ, ಮತ್ತು ಅನೇಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು