ಚಿಂಚೋಳಿ: ಅದ್ದೂರಿಯಾಗಿ ಜರುಗಿದ ಶ್ರೀಸಂತ ಸೇವಾಲಾಲ್ ಜಯಂತೋತ್ಸವ

ಚಿಂಚೋಳಿ,ಮಾ.7- ಪೂಜ್ಯ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಚಿಂಚೋಳಿ ಪಟ್ಟಣದ ಅಂಬೇಡ್ಕರ್ ಹೋತದಿಂದ 11:00ಗೆ ಶೋಭ ಯಾತ್ರೆ ಪ್ರಾರಂಭವಾಯಿತು ಸುಮಾರು ನಾಲ್ಕು ಗಂಟೆಗಳ ಅದ್ದೂರಿಯಾಗಿ ಶೋಭಾ ಯಾತ್ರೆ ಜರುಗಿತು.
ನಂತರ ನೂತನ ಮಿನಿವಿಧಾನಸೌಧ ಎದುರುಗಡೆ ಜರುಗಿದ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪೌರಾದೇವಿ ಪರಮ ಪೂಜ್ಯ ಶ್ರೀ ಬಾಬುಸಿಂಗ್ ಮಹಾರಾಜರು, ಅವರ ಜ್ಯೋತಿ ಬಳಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಕಲಬುರ್ಗಿ ಲೋಕಸಭೆ ಸದಸ್ಯರಾದ ಡಾ. ಉಮೇಶ ಜಾಧವ, ಅವರು ಮಾತನಾಡಿ ಚಿಂಚೋಳಿ ತಾಲೂಕಿನಂದಲೇ ನನ್ನ ರಾಜಕೀಯ ಆರಂಭವಾಗಿದ್ದು ಅದರಂತೆ ಭಾರತ ದೇಶದಲ್ಲಿ ಬಂಜಾರ ಸಮಾಜದ ಏಕೈಕ ಸದಸ್ಯರು ನಾನೆಯಾಗಿದ್ದು ಈ ಲೋಕಸಭೆ ಸದಸ್ಯನಾಗಲು ಬಂಜಾರ ಸಮಾಜದ ಬಾಂಧವರ ಪ್ರಮುಖ ಕಾರಣವಾಗಿದ್ದು ಅದೇ ರೀತಿ ಭಾರತ ದೇಶದಲ್ಲೂ ಕೂಡ ಬಂಜಾರ ಸಮಾಜದ ಒಗ್ಗಟ್ಟಗಟ್ಟನಿಂದ ಇರಲು ಬಂಜಾರ ಸಮಾಜದವರು ಯಾವುದೇ ಒಂದು ಪಕ್ಷದಲ್ಲಿದ್ದರೂ ಕೂಡ ಪಕ್ಷಭೇದ ಮರೆತು ಸಮಾಜ ಬಂದರೆ ಒಂದಾಗಿ ಸಮಾಜ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕು.
ಅದರಂತೆ ಕಲಬುರಗಿ ಲೋಕಸಭೆಯಿಂದ ಮತ್ತೊಮ್ಮೆ ಎರಡನೇ ಬಾರಿ ಬಂಜಾರ ಸಮಾಜ ವನ್ ಅದ ನಾನು ಚುನಾವಣೆ ಸ್ಪರ್ಧೆ ಮಾಡುತ್ತಿದ್ದಾನೆ ಅದರಂತೆ ಎಲ್ಲಾ ಬಂಜಾರದ ಸಮಾಜದ ಬಾಂಧವರು ಯಾವುದೇ ಒಂದು ಪಕ್ಷದಲ್ಲಿರಲಿ ಪಕ್ಷಬೇಧ ಮರೆತು ನಮ್ಮ ನನಗೆ ಆಶೀರ್ವಾದ ಮಾಡಬೇಕು ಬಂಜಾರ ಸಮಾಜ ದಿಂದ ಭಾರತ ದೇಶದಲ್ಲಿ ನಾನೊಬ್ಬನೇ ಪ್ರಥಮ ಬಾರಿ ಆಯ್ಕೆಯಾಗಿದ್ದೇನೆ ಎರಡನೇ ಬಾರಿ ಕೂಡ ನನಗೆ ಅವಕಾಶ ಮಾಡಿಕೊಡಬೇಕೆಂದು ಬಂಜಾರ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಸುಭಾಷ್ ರಾಠೋಡ,ಅವರು ಮಾತನಾಡಿ ಬಂಜಾರ ಸಮಾಜ ಬಾಂಧವರು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಬಳಿರಾಮ ಮಹಾರಾಜರು ಗೊಬ್ಬುರ ವಾಡಿ, ಪರಮ ಪೂಜ್ಯ ಶ್ರೀ ವಿಠ್ಠಲ್ ಮಹಾರಾಜರು ಕೊರವಿ ತಾಂಡಾ, ಪರಮ ಪೂಜ್ಯ ಶ್ರೀ ರಾಜು ಮಹಾರಾ ಸಲಗರ ಬಸಂತಪು, ಕಾರ್ಯಕ್ರಮದ ಶಾಸಕರಾದ ಡಾ. ಅವಿನಾಶ ಜಾಧವ, ಸ್ವಾಗತ ಸಮಿತಿ ಅಧ್ಯಕ್ಷರಾದ ಜಗನ್ನಾಥ ರಾಠೋಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಬುರಾವ್ ಪಾಟೀಲ್, ಬಿಜೆಪಿ ಪಕ್ಷದ ಮುಖಂಡರಾದ ಗೌತಮ್ ಪಾಟೀಲ್, ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಬಸವರಾಜ ಮಲಿ, ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ವಿಜಯಕುಮಾರ, ರಾಮಶೆಟ್ಟಿ ಪವಾರ, ಅಶೋಕ ಚವ್ಹಾಣ, ರಾಜು ಪವಾರ್, ಪ್ರೇಮಸಿಂಗ ಜಾಧವ್, ತುಕಾರಾಮ್ ಪವಾರ, ಗೋಪಾಲ ಜಾಧವ್, ಮೇಘರಾಜ ರಾಠೋಡ, ಶಾಮರಾವ ರಾಠೋಡ, ವಿವಿಧ ಸಮಾಜದ ಅಧ್ಯಕ್ಷರು ಮತ್ತು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಬಂಜಾರ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು