
ಚಿಂಚೋಳಿ,ಆ.6- ಚಂದಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಲೋಕಶಾಹಿರ ಅಣ್ಣಾಬಾಹು ಸಾಠೇಯವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ದಲಿತ ಸಮಾಜದ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ಮಾರುತಿ ಗಂಜಗಿರಿ, ಮುಖ್ಯ ಅತಿಥಿಗಳಾಗಿ ಸಿರಾಜ್ ಕುಪನೂರ ನಿವೃತ್ತ ಮುಖ್ಯೋಪಾಧ್ಯಾಯರು ಗಣಪತಿ ದೇವಕತೆ ಮುಖ್ಯಗುರುಗಳು ಗೋಪಾಲ ಗಾರಂಪಳ್ಳಿ ಶಿವರಾಯ ಕಾಳಗಿ ಆರೋಗ್ಯ ಇಲಾಖೆ ಅವರು ಸಾಠೆ ಅವರ ಸೇವೆಯ ಕುರಿತು ಮಾತನಾಡಿದರು.
ಸಂದೀಪ್ ದೇಗಲ್ಮಡಿ ಶಾಮ ತಾಜಲಪೂರ ಯಲ್ಲಾಲಿಂಗ ದಂಡಿನ ಸಾಗರ ಹೋಸಳ್ಳಿ ಗಮ್ಮು ರಾಠೋಡ್ ಕೃಷ್ಣ ಮೌನೇಶ್ ಗಾರಂಪಳ್ಳಿ ಮುಂತಾದವರು ಉಪಸ್ಥಿತರಿದ್ದರು ಮೋಹನ್ ಐನಾಪುರ ನಿರೂಪಿಸಿದರು ಹರ್ಷವರ್ಧನ ಚಿಮ್ಮನಕಟ್ಟಿ ವಂದಿಸಿದರು