ಚಿಂಚೋಳಿ: ಅಗಲಿದ ಬೆಳಗೆರೆಗೆ ಶ್ರದ್ಧಾಂಜಲಿ

ಚಿಂಚೋಳಿ, ನ.14- ಅಗಲಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಆತ್ಮಕ್ಕೆ ಶಾಂತಿಕೋರಿ ಪತ್ರಕರ್ತರು ಮತ್ತು ಸಾಹಿತಿಗಳು ಶ್ರದ್ಧಾಂಜಲಿ ಅರ್ಪಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಕಾರ್ಯನಿರ್ವಾಹಕ ಪತ್ರಕರ್ತ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅಗಲಿದ ರವಿ ಬೆಳಗೇರಿ ಅವರ ಆತ್ಮಕ್ಕೆ ಶಾಂತಿಕೋರಿ ಅಕ್ಷರ ಮನಮ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಲಮೂರ ಮತ್ತು ಸಾಹಿತಿಗಳಾದ ದಂಡಿನ ಕುಮಾರ ಅವರು ದಿ.ಬೆಳಗೇರಿ ಅವರ ಸೇವೆಯನ್ನ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶಾಮರಾವ ಓಂಕಾರ. ಎಂಪಿ ರಾಮರಾವ ಕುಲಕರ್ಣಿ. ರವಿಶಂಕರ್ ರೆಡ್ಡಿ ಮುತ್ತಂಗಿ. ಡಾ. ಜ್ಯೋತಿಲಿರ್ಂಗ ಸೂಗುರು. ಉಪನ್ಯಾಸಕರಾದ ಶಾಂತವೀರ ಹಿರಾಪುರ. ಸಾಹಿತಿಗಳಾದ ಬಸವರಾಜ ಐನೋಳ್ಳಿ. ಜಗದೇವ ಗೌತಮ ಹಸರಗುಂಡಗಿ. ಮತ್ತು ಅನೇಕ ಸಾಹಿತಿಗಳು ಹಾಗೂ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು