ಚಿಂಚೋಳಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ

ಚಿಂಚೋಳಿ,ಜೂ.21- ಇಲ್ಲಿನ ಚಂದಾಪುರ್ ಪಟ್ಟಣದ ಸಿ.ಬಿ ಪಾಟೀಲ್ ಕಾಲೇಜಿನಲ್ಲಿಂದು ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು, ಇಂದಿನ ಯುವಕರು ಮತ್ತು ಎಲ್ಲಾ ನಾಗರಿಕರು ದಿನನಿತ್ಯ ಯೋಗ ಮಾಡುವ ಮೂಲಕ ತಮ್ಮ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಯಾವುದೇ ಕಾಯಿಲೆ ಬರದಂತೆ ನಾವು ದಿನನಿತ್ಯ ತಮ್ಮ ಮನೆಯಲ್ಲಿ ಒಂದು ಅಥವಾ ಅರ್ಧ ಗಂಟೆ ಯೋಗಗಳನ್ನು ಮಾಡಬೇಕು ಮತ್ತು ಎಲ್ಲಾ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳು ಕೂಡ ತಮ್ಮ ಮನೆಯಲ್ಲಿ ದಿನನಿತ್ಯ ಯೋಗವನ್ನು ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್,ಪುರಸಭೆ ಅಧ್ಯಕ್ಷೆ ಜಗದೇವಿ ಗಂಡತಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲ್ ರಾಠೋಡ, ವೈ ಎಸ್ ಪಿ ಬಸವೇಶ್ವರ ಹೀರಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಗುರುಪ್ರಸಾದ ಕವಿತಾಳ, ಪುರಸಭೆ ಮುಖ್ಯಧಿಕಾರಿ ಕಾಶಿನಾಥ್ ಧನ್ನಿ, ಲೋಕಾಯುಕ್ತ ಯೋಗಿ ಇಲಾಖೆ ಅಧಿಕಾರಿಗಳಾದ ಆನಂದ ಕಟ್ಟಿ, ಗ್ರೇಟೆ 2, ತಹಸಿಲ್ದಾರ್ ವೆಂಕಟೇಶ ದುಗ್ಗನ್, ಬಿಇಓ ರಾಚಪ್ಪ ಭದ್ರಶೆಟ್ಟಿ, ತಾಲೂಕ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ. ಮೊಮ್ಮದ್ ಗಫಾರ್, ಲೋಕಾಯುಕ್ತ ಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಆದ ಗಿರಿರಾಜ ಸಜ್ಜನ್, ಕಂದಾಯ ನೀರಿಕ್ಷಕ ರವಿಕುಮಾರ ಚಿಟ್ಟ, ಪಿಎ??? ಮಂಜುನಾಥ ರೆಡ್ಡಿ, ಜಗದೀಶ್ ನಾಯಕ, ಉದಂಡಪ್ಪ, ಅಶೋಕ ಪಾಟೀಲ್, ರೇವಣಸಿದ್ಧ ಮೋಘ, ಶ್ರೀನಿವಾಸ ಪಾಟೀಲ್, ಕೆ.ಎಂ. ಬಾರಿ, ಶ್ರೀಮಂತ ಕಟ್ಟಿಮನಿ, ಸಂತೋಷ್ ಗಂಡತಿ, ಪ್ರೇಮಸಿಂಗ್ ಜಾಧವ್, ರಾಜು ಪವಾರ್, ಸತೀಶ್ ರೆಡ್ಡಿ,ಅಮರ್ ಲೋಡ್ಡನೋರ. ಗಿರಿರಾಜ ನಾಟಿಕರ್, ಕಾಶಿನಾಥ್ ನಾಟಿಕರ್, ವೀರ ರೆಡ್ಡಿ, ಸುರೇಕಾಂತ ಚಿಂಚೋಳಿಕರ್, ಕಸ್ತೂರಿಬಾಯಿ ಮುಖ್ಯಗುರುಗಳು ಅಶ್ವಿನಿ ಮುಲ್ಗೆ, ದೈಹಿಕ ಶಿಕ್ಷಕಿ ತಾರಾ, ವಾರ್ಡ್ ಜ್ಯೋತಿ, ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ವಿವಿಧ ಇಲಾಖೆಯ ಸಿಬ್ಬಂದಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.