ಚಿಂಚೋಳಿ: ಅಂಗಡಿ ಕಳ್ಳತನ ಪ್ರಕರಣ ಸಿಓಡಿಗೆ ಒಪ್ಪಿಸಿ

ಚಿಂಚೋಳಿ,ಜು.24- ಇಲ್ಲಿನ ಬಸವ ಟೈರ್ ಶೋರೂಂ ನಲ್ಲಿ ಕಳೆದ ಆರು ತಿಂಗಳಲ್ಲಿ ಮೂರು ಸಲ ಕಳ್ಳತನವಾದರು, ಚಿಂಚೋಳಿ ಪೆÇೀಲಿಸರು ಪ್ರಕರಣ ಭೇದಿಸಲು ವಿಫಲರಾಗಿದ್ದಾರೆ ಎಂದು ಚಿಂಚೋಳಿ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮಂತ ಬಿ ಕಟ್ಟಿಮನಿ, ಅವರು ಆರೋಪಿಸಿದ್ದಾರೆ.
ಚಿಂಚೋಳಿ ಪೆÇೀಲಿಸರು ಕೇವಲ ದೂರು ದಾಖಲಿಸಿಕೊಂಡು ತನಿಖೆಯನ್ನು ಮರೆತು ಬೀಡುತ್ತಾರೆ, ಇದರಲ್ಲಿ ಬೀಟ್ ಪೆÇೀಲಿಸ್ ಎಸ್ ಬಿ ಪೆÇೀಲಿಸರ ಕರ್ತವ್ಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ.
ಕಳ್ಳತನ ಪ್ರಕರಣಗಳಲ್ಲಿ ಚಿಂಚೋಳಿ ಪೆÇೀಲಿಸರು ತಮ್ಮ ಕರ್ತವ್ಯ ನಿರ್ಲಕ್ಷ ಕಂಡು ಬರುತ್ತಿರುವುದರಿಂದ ಕೂಡಲೇ ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಅವರು ಅವರು ಜಿಲ್ಲಾ ಪೆÇಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.