ಚಿಂಚೋಳಿಯ ಕೆಲ ಬಿಜೆಪಿ ನಾಯಕರಿಗೆ ಬುದ್ಧಿ ಬ್ರಹ್ಮಣೆಯಾಗಿದೆ: ಜಮಾದಾರ

ಚಿಂಚೋಳಿ,ಜೂ.4- ತಾಲೂಕಿನ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಾರೆ ಎಂದು ಚಿಂಚೋಳಿಯ ಕೆಲವು ಬಿಜೆಪಿ ಶೋಕಿಲಾಲ ನಾಯಕರು ಹೇಳುತ್ತಿರುವುದು ನೋಡಿದರೆ ಅವರಿಗೆ ಬುದ್ಧಿ ಬ್ರಹ್ಮಣೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷ ಅನೀಲ್ ದೇವಿಂದ್ರಪ್ಪ ಜಮಾದಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಸಂಸದರನ್ನು ಖುಷಿ ಮಾಡಿ ಒಲಿಸಿಕೊಳ್ಳಲು ಇಂತಹ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಅವರ ದುರುದ್ಧೇಶ ಸ್ಪಷ್ಟವಾಗಿ ಕಾಣುತ್ತದೆ.
ಕಾರ್ಯಕರ್ತರನ್ನು, ಮುಖಂಡರನ್ನು ತಯ್ಯಾರಿ ಮಾಡಿ ಬೆಳೆಸುವ ತಾಕತ್ತು ಇಲ್ಲದ ಬಿಜೆಪಿಯ ಕೆಲವು ನಾಮ್ಕೆವಾಸ್ತ ನಾಯಕರು ಇಲ್ಲಸಲ್ಲದ ಆಸೆ ಆಮಿಷಗಳನ್ನು ತೋರಿಸಿ ಅನ್ಯ ಪಕ್ಷದ ನಾಯಕರ ಮನೆ ಮುಂದೆ ಹೋಗಿ ವಾಪಸಾಗುವ ಮೂಲಕ ಮುಖಭಂಗವಾಗಿ ಅನುಭವಿಸಿದ್ದಾರೆ.
ಕೈ ಹಿಸುಕುತ್ತ ಮರಳುತ್ತಿದ್ದಾರೆ, ಹಣದ, ಕೆಲಸದ ಆಸೆ ತೋರಿಸಿದರೆ ಇಲ್ಲಿನ ಕೈ ಮುಖಂಡರು ಬಿಜೆಪಿ ಸೇರುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ.
ಸತ್ಯ ಅರ್ಥ ಮಾಡ್ಕೊಳ್ಳದ ಬಿಜೆಪಿಯವರಿಗೂ ಮತ್ತು ತಾಲೂಕಿನ ಜನತೆಗೂ ಇಲ್ಲಿ ಮಾರಾಟ ಆಗುವವರು ಆಗಲೇ ಮಾರಾಟ ಆಗಿದ್ದಾರೆ, ಕಲ್ಬುರ್ಗಿ ಜಿಲ್ಲೆಯಲ್ಲೇ ಚಿಂಚೋಳಿ ಕಾಂಗ್ರೆಸ್ ಪಕ್ಷ ಅತಿ ಸಧೃಡ ಪಡೆ ಹೊಂದಿದೆ, ಶಾಸಕರ, ಸಂಸದರ ಎಡಗೈ, ಬಲಗೈ ಸ್ಥಾನದಲ್ಲಿರುವ ಅನೇಕ ಬಿಜೆಪಿಯ ನಾಯಕರುಗಲು ಕಾಂಗ್ರೆಸ್ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಸೂಕ್ತ ಸಮಯದಲ್ಲಿ ಬಿಜೆಪಿಯ ದೊಡ್ಡ ಪಡೆಯನ್ನು ನಮ್ಮ ನಾಯಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಿಕೊಳ್ಳುತ್ತೇವೆ, ತಮ್ಮ ಪಕ್ಷದ ವಾಸ್ತವ ಅರಿಯದ ಶೋಕಿಲಾಲರು ಮನಸೋ ಇಚ್ಛೆ ಹೇಳಿಕೆ ಕೊಟ್ಟು ತಮ್ಮ ಚಪಲ ತೀರಿಸಿಕೊಳ್ಳುತ್ತಿದ್ದಾರೆ.
ಯಾರೂ ಇಬ್ಬರು ಸಂಸದರ ಚೇಲಾಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರಿದ್ದಾರೆ ವಿನಃ ಬೇರೆಯಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿಲ್ಲ ಮತ್ತು ಈಗಾಗಲೇ ಚಿಂಚೋಳಿ ತಾಲೂಕಿನ ಜನರ ಸೇವೆ ಮಾಡುವವರಲ್ಲಿ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ.
ಕೊರೊನಾ ಸೋಂಕು ಹೆಸರಿನಲ್ಲಿ ಬಿಜೆಪಿ ಸರ್ಕಾರವು ಹಣವನ್ನು ಲೂಟಿ ಮಾಡುತ್ತಿದ್ದು, ಇದು ಜನರಿಗೆ ಅರ್ಥವಾಗಿದೆ ಅದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಧೂಳಿ ಪಟವಾಗಲಿದೆ.
ರಾಜ್ಯ ಸರ್ಕಾರವು ಲಾಕ್‍ಡೌನ್ ಸಂಕಷ್ಟದಲ್ಲಿರುವ ರಾಜ್ಯದ ಜನರಿಗಾಗಿ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಿದ್ದಾರೆ ಆದರೆ ಇಲ್ಲಿಯವರೆಗೂ ಯಾವೊಬ್ಬ ಬಡಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ ಹಾಗೂ ವಾಹನ ಚಾಲಕರಿಗೆ ಯಾವುದೇ ಒಂದು ನಯಾಪೈಸೆ ಕೂಡ ಪರಿಹಾರ ಸಿಕ್ಕಿಲ್ಲ ಇದರಿಂದ ಸಾಕಷ್ಟು ಜನರ ಕೊರೊನಾ ಸೋಂಕು ದಿಂದ ಬರುತ್ತಿಲ್ಲ ಹಸು ದಿಂದ ರಾಜ್ಯದ ಜನರು ಬದುಕುತ್ತಿದ್ದಾರೆ ಇದರ ಬಗ್ಗೆ ಬಿಜೆಪಿ ಸರ್ಕಾರ ಕೂಡಲೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜನ್ನು ಕೂಡಲೇ ರಾಜ್ಯದ ಜನರಿಗೆ ನೀಡಬೇಕು ಎಂದು ಅನೀಲ್ ದೇವಿಂದ್ರಪ್ಪ ಜಮಾದಾರ್ ಅವರು ಒತ್ತಾಯಿಸಿದರು.