ಚಿಂಚೋಳಿಯಿಂದ ಜಿಲ್ಲಾ ಕೇಂದ್ರಕ್ಕೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಚಿಂಚೋಳಿ,ಜ.9- ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು ಚಿಂಚೋಳಿಯಿಂದ ಕಲಬುರ್ಗಿ ಜಿಲ್ಲಾ ಕೇಂದ್ರಕ್ಕೆ ಹೋಗಲು ಸಮರ್ಪಕ ಸಾರಿಗೆ ಬಸ್‍ಗಳನ್ನು ಕಲ್ಪಿಸುವಂತೆ ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಉಲ್ಲಾಸ್ ಕುಮಾರ್ ಕೆರಳ್ಳಿ ಅವರು ಆಗ್ರಹಿಸಿದ್ದಾರೆ.
ಇಲ್ಲಿಂದ ಬೆಳಗ್ಗೆ ಹೋಗಬೇಕಾದರೆ ಸಾರಿಗೆ ಸಂಸ್ಥೆಯ ಬಸ್ ಬೆಳಗ್ಗೆ ಸುಮಾರು 7 ಗಂಟೆ ಇದ್ದು, ಇದಾದನಂತರ ಬೆಳಗ್ಗೆ 9 ಗಂಟೆಗೆಯ ವರೆಗೆ ಯಾವುದೇ ಒಂದು ಬಸು ಇರುವುದಿಲ್ಲ.
ಚಿಂಚೋಳಿ ತಾಲೂಕಿನ ಸಾರಿಗೆ ಇಲಾಖೆಯು ಸಮಯಕ್ಕೆ ಅನುಸಾರವಾಗಿ ಸಾರ್ವಜನಿಕರಿಗೆ ಬಸ್ ಗಳ ಸೇವೆಯನ್ನು ಕಲ್ಪಿಸಬೇಕು ಇದು ಸಾಧ್ಯವಾಗದೇ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ಸನ್ ಕಷ್ಟವಾಗುತ್ತಿತ್ತು. ಚಿಂಚೋಳಿಯಿಂದ ಬೆಳಗ್ಗೆ ಕಲಬುರ್ಗಿಗೆ ಹೋಗಬೇಕಾದರೆ ಬೆಳಗ್ಗೆ 7:00 ಗಂಟೆಗೆ ಒಂದು ಬಸ್ಸು ಇದ್ದು. ನಂತರ 9 ಗಂಟೆಗೆ ಮೂರು ಬಸ್ಸುಗಳನ್ನು ಒಟ್ಟಿಗೆ ಬಿಡುತ್ತಿದ್ದು ಇದರಿಂದ ತೊಂದರೆಯಾಗುತ್ತಿದ್ದು ಬೆಳಗ್ಗೆ 7:00 ಗೆ ಹೋದಾಗ ಬಸ್ ಎಂಟು ಗಂಟೆಗೆ: ತಕ ಯಾವುದೇ ಒಂದು ಬಸ್ಸು ಇದರಿಂದ ಬದಲಾಗಿ ಬಗ್ಗೆ 9 ಗಂಟೆಗೆ ಕಳುಹಿಸುತ್ತಿದ್ದಾರೆ ಇದರಿಂದ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಬೆಳಗ್ಗೆ 7:00 ಇಂದ ಸತತ ಅರ್ಧಗಂಟೆಗೊಮ್ಮೆ ಸಾರಿಗೆ ಅವಸ್ಥೆಗಳು ಬಿಟ್ಟು ಚಿಂಚೋಳಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಉಲ್ಲಾಸ್ ಕುಮಾರ್ ಕೆರಳ್ಳಿ. ಅವರು ಸಾರಿಗೆ ಇಲಾಖೆಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.