ಚಿಂಚೋಳಿಯಲ್ಲಿ ಮೊಹರಂ ಹಬ್ಬ ಅದ್ದೂರಿ ಆಚರಣೆ

(ಸಂಜೆವಾಣಿ ವಾರ್ತೆ)
ಚಿಂಚೋಳಿ,ಜು.30- ಪಟ್ಟಣದ ಬಡಿ ದರ್ಗಾದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೇರಿ ಪವಿತ್ರ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಣೆಯನ್ನು ಮಾಡಿದರು.
ಅಲ್ಲದೇ ಪÀಟ್ಟಣದ ವಿವಿಧಡೆ ಒಟ್ಟು 13ಕಡೆ ಮೊಹರಂ ಹಬ್ಬದ ಪೀರಗಳು ಅಮವಾಸ್ಯೆ ಆದ ಮರುದಿನ ಗುದ್ದಲಿ ಹಾಕಿ ಮರುದಿನ ಹತ್ತು ದಿನದ ಪೀರಗಳು ಹಾಗೂ ಐದು ದಿನದ ಪೀರಗಳು ಸ್ಥಾಪನೆ ಮಾಡುತ್ತಾರೆ.
ಮೊಹರಂ ಹಬ್ಬದ ಹತ್ತನೇ (ದಸವೀ) ದಿನ ಪಟ್ಟಣದ 13ಕಡೆ ಸ್ಥಾಪನೆ ಮಾಡಿದ ಪೀರಗಳು ಎಬ್ಬಿಸಿಕೊಂಡು ವಿಜೃಂಭಣೆಯಿಂದ ಆಚರಣೆ ಮಾಡುತ್ತಾ ಮೊಹರಂ ಪದಗಳು ಹಾಡುತ್ತಾ ಹುಲಿಯ ವೇಷ ಬಣ್ಣ ಧರಿಸಿ ನೃತ್ಯ ಪ್ರದರ್ಶನ ಮಾಡುತ್ತಾ ಬಡಿದರ್ಗಾದ ಬಾಗಿಲಿಗೆ ಬಂದು ದಫಾನ್ ಆಗಲು ಬರುತ್ತಾರೆ.
ಪಟ್ಟಣದ ಬಡಿದರ್ಗಾದ ಚಂದಾ ಹುಸೇನಿ, ಹಸೇನ್ ಹುಸೈನ್ ಆಲಂಗಳು ದರ್ಗಾದ ಸಜ್ಜಾದೆ ನಶೀನ್ ಸೈಯದ್ ಶಾಹ ಅಕ್ಬರ್ ಹುಸೇನ್ ನೇತೃತ್ವದಲ್ಲಿ ಸಾಯಂಕಾಲ ಪೀರಗಳು ಎಬ್ಬಿಸಿ ಪಟ್ಟಣದಲ್ಲಿನ ಬಂದ ಎಲ್ಲಾ ಪೀರಗಳಿಗೆ ಭೇಟಿಯಾಗಿ ದಫಾನ್ ಮಾಡಿ ಮತ್ತೆ ಅವರವರ ಸ್ಥಳಗಳಿಗೆ ಹೋಗಿ ಪೀರಗಳು ಸ್ಥಾಪನೆ ಮಾಡಿದ್ದರು.
ಪಟ್ಟಣದ ಬಡಿದರ್ಗಾದ ಆಲಂಗಳು ಅತಿದೊಡ್ಡ ಗಾತ್ರದಿಂದ ಹೊಂದಿದ ಪೀರಗಳು ನೋಡಲು ಸುತ್ತಮುತ್ತಲಿನ ಗ್ರಾಮಗಳಾದ ಐನೋಳ್ಳಿ,ಕೋಳ್ಳೂರ, ಪತ್ತೆಪೂರ, ಅಣವಾರ, ನಿಮಾಹೋಸಳ್ಳಿ, ಚಿಮ್ಮಾಯಿದ್ಲಾಯಿ, ನಾಗಯಿದ್ಲಾಯಿ, ಎಂಪಳ್ಳಿ, ಪೆÇೀಲಕಪಳ್ಳಿ, ಕಲ್ಲೂರ ರೋಡ, ದೇಗಲಮಡಿ, ಕನಕಪುರ, ತಾದಲಾಪೂರ, ದೋಟಿಕೋಳ, ಅನೇಕ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿ ಚಂದಾ ಹುಸೇನಿ ಪೀರ್ ಎಬ್ಬಿಸುವಾಗ ನಾಣ್ಯಗಳು ಏಸೇದು ಜನರು ಹರಕೆ ತಿರಿಸುತ್ತಾರೆ. ಯಾವುದೇ ಅನಾಹುತ ಆಗದಂತೆ ಡಿವೈಎಸ್ಪಿ ಕೆ.ಬಸವರಾಜ ನೇತೃತ್ವದಲ್ಲಿ ಸೂಕ್ತ ಪೆÇೀಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಮೊಹರಂ ಹಬ್ಬದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಭಾಗವಹಿಸಿದ್ದರು